* ಅಫೀಮು ಬೆಳೆಯುವ ವಿಶ್ವದ ಅತಿದೊಡ್ಡ ರಾಷ್ಟ್ರವಾಗಿ ಮ್ಯಾನ್ಮಾರ್‌ ಗುರುತಿಸಿಕೊಂಡಿದೆ ಎಂದು ವಿಶ್ವ ಸಂಸ್ಥೆಯ ವರದಿ ಡಿಸೆಂಬರ್ 12 ರಂದು ತಿಳಿಸಿದೆ. * ಅಫ್ಗಾನಿಸ್ತಾನದಲ್ಲಿನ ತಾಲಿಬಾನ್‌ ಸರ್ಕಾರ 2022ರಲ್ಲಿ ಅಫೀಮು ಕೃಷಿ ಮೇಲೆ ನಿಷೇಧ ಹೇರಿದ ಬಳಿಕ, ಶೇ 95 ರಷ್ಟು ಅಫೀಮು ಬೆಳೆಯ ಉತ್ಪಾದನೆ ಕುಸಿದ ಬಳಿಕ ಜಾಗತಿಕ ಅಫೀಮು ಸರಬರಾಜು ಅಪ್ಘನಿಸ್ತಾನದಿಂದ ಮ್ಯಾನ್ಮಾರ್ ಗೆ ಸ್ಥಳಾಂತರಗೊಂಡಿದೆ.* ಮ್ಯಾನ್ಮಾರ್ ರೈತರು ಈಗ ಅಫೀಮು ಗಸಗಸೆ ಕೃಷಿಯಿಂದ ಸುಮಾರು 75% ಹೆಚ್ಚು ಗಳಿಸುತ್ತಾರೆ, ಏಕೆಂದರೆ ಹೂವಿನ ಸರಾಸರಿ ಬೆಲೆಗಳು ಪ್ರತಿ ಕಿಲೋಗ್ರಾಮ್‌ಗೆ ಸುಮಾರು 29,594 ತಲುಪಿದೆ ಮತ್ತು ಕೃಷಿ ಪ್ರದೇಶವು ವರ್ಷದಿಂದ ವರ್ಷಕ್ಕೆ 18% ರಷ್ಟು ಹೆಚ್ಚಾಗಿದೆ, 40,100 ರಿಂದ 47,000 ಹೆಕ್ಟೇರ್‌ಗಳಿಗೆ ಅದರ ಸಂಭಾವ್ಯ ಇಳುವರಿಯನ್ನು ಹೆಚ್ಚಿಸುತ್ತದೆ.* ಉತ್ತರದ ರಾಜ್ಯಗಳಾದ ಶಾನ್, ಚಿನ್ ಮತ್ತು ಕಚಿನ್‌ನಲ್ಲಿರುವ ಮ್ಯಾನ್ಮಾರ್‌ನ ಗಡಿ ಪ್ರದೇಶಗಳಲ್ಲಿ ಅಫೀಮು ಕೃಷಿ ಪ್ರದೇಶ ಭಾರಿ ಪ್ರಮಾಣದಲ್ಲಿ ವಿಸ್ತರಿಸಲ್ಪಟ್ಟಿವೆ. ಅತ್ಯಾಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವುದರಿಂದ ಇಳುವರಿಯು ಪ್ರತಿ ಹೆಕ್ವೆರ್‌ಗೆ ಶೇ 16ರಷ್ಟು ಏರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.