* ವಾಣಿಜ್ಯ ಸಚಿವಾಲಯದ ಅಂಗ ಸಂಸ್ಥೆಯಾದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA), ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿಗೆ "ಭಾರತಿ" ಉಪಕ್ರಮವನ್ನು ಪ್ರಾರಂಭಿಸಿದೆ.* ಇದರ ಉದ್ದೇಶ 100 ಕೃಷಿ-ಆಹಾರ ಮತ್ತು ಕೃಷಿ-ತಂತ್ರಜ್ಞಾನದ ನವೋದ್ಯಮಗಳಿಗೆ ಸಹಾಯಮಾಡಿ ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಯುವ ಉದ್ಯಮಿಗಳಿಗೆ ಹೊಸ ರಫ್ತು ಅವಕಾಶಗಳನ್ನು ಸೃಷ್ಟಿಸುವುದು.* ಭಾರತಿ ಎಂದರೆ Bharat’s Agri-tech, Resilience, Advancement and Technology Incubation for Export Enablement. ಈ ಯೋಜನೆ GI-ಟ್ಯಾಗ್ ಉತ್ಪನ್ನಗಳು, ಸಾವಯವ ಆಹಾರ, ಸೂಪರ್ಫುಡ್ಗಳು, ನವೀನ ಸಂಸ್ಕರಿಸಿದ ಆಹಾರ, ಜಾನುವಾರು ಮತ್ತು ಆಯುಷ್ ಉತ್ಪನ್ನಗಳಂತಹ ಉನ್ನತ ಮೌಲ್ಯದ ವಿಭಾಗಗಳನ್ನು ಗುರಿಯಾಗಿಸಿಕೊಂಡಿದೆ.* ಈ ಉಪಕ್ರಮವು AI ಆಧಾರಿತ ಗುಣಮಟ್ಟ ನಿಯಂತ್ರಣ, ಬ್ಲಾಕ್ಚೈನ್ ಪತ್ತೆಹಚ್ಚುವಿಕೆ, IoT ಶೀತ ಸರಪಳಿ, ಕೃಷಿ-ಫಿನ್ಟೆಕ್, ನವೀನ ಪ್ಯಾಕೇಜಿಂಗ್ ಮತ್ತು ಸುಸ್ಥಿರತೆಯಂತಹ ತಂತ್ರಜ್ಞಾನಗಳನ್ನು ಉತ್ತೇಜಿಸುತ್ತದೆ. ಇದರಿಂದ ರಫ್ತು ಸವಾಲುಗಳಾದ ಉತ್ಪನ್ನ ಗುಣಮಟ್ಟ, ಹಾಳಾಗುವಿಕೆ, ವ್ಯರ್ಥ ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಗಳನ್ನು ಪರಿಹರಿಸಲಾಗುವುದು.\* ಸೆಪ್ಟೆಂಬರ್ 2025 ರಿಂದ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ APEDA 100 ಸ್ಟಾರ್ಟ್ಅಪ್ಗಳನ್ನು ಆಯ್ಕೆ ಮಾಡಿ, ಮೂರು ತಿಂಗಳ ವೇಗವರ್ಧನೆ (acceleration) ಕಾರ್ಯಕ್ರಮವನ್ನು ನಡೆಸಲಿದೆ.* ಇದರಲ್ಲಿ ಉತ್ಪನ್ನ ಅಭಿವೃದ್ಧಿ, ರಫ್ತು ಸಿದ್ಧತೆ, ನಿಯಂತ್ರಕ ಅನುಸರಣೆ ಮತ್ತು ಮಾರುಕಟ್ಟೆ ಪ್ರವೇಶಕ್ಕೆ ಮಾರ್ಗದರ್ಶನ ನೀಡಲಾಗುವುದು.* ಈ ಪೈಲಟ್ ಸಮೂಹವು ಭವಿಷ್ಯದ ವಾರ್ಷಿಕ ಇನ್ಕ್ಯುಬೇಶನ್ ಕಾರ್ಯಕ್ರಮಕ್ಕೆ ಮಾದರಿಯಾಗಿದ್ದು, ದೀರ್ಘಾವಧಿಯ ರಫ್ತು ಬೆಳವಣಿಗೆ ಮತ್ತು ನಿರಂತರ ನಾವೀನ್ಯತೆಯನ್ನು ಉತ್ತೇಜಿಸುವುದಾಗಿ ಸಚಿವಾಲಯ ತಿಳಿಸಿದೆ.