* ಅನುಪರ್ಣಾ ರಾಯ್ ಅವರ 'Songs of Forgotten Trees' ಹಿಂದಿ ಚಿತ್ರಕ್ಕೆ ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಲಭಿಸಿದೆ.* ಅನುರಾಗ್ ಕಶ್ಯಪ್ ಪ್ರಸ್ತುತಪಡಿಸಿರುವ ಈ ಚಿತ್ರವು ಸೆಪ್ಟೆಂಬರ್ 1ರಂದು ಪ್ರತಿಷ್ಠಿತ ಒರಿಝೋಂಟಿ ಸ್ಪರ್ಧಾ ವಿಭಾಗದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಈ ವಿಭಾಗವು ಹೊಸ ಪ್ರವೃತ್ತಿ, ಪರಿಕಲ್ಪನೆ ಮತ್ತು ಯುವ ಪ್ರತಿಭೆಗಳನ್ನು ಉತ್ತೇಜಿಸುತ್ತದೆ.* ರಾಯ್ ಅವರು ಈ ಚಿತ್ರವನ್ನು ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಮಹಿಳೆಯರಿಗೆ ಅರ್ಪಿಸಿದ್ದಾರೆ. ಈ ಗೆಲುವು ಮಹಿಳೆಯರ ಧ್ವನಿಯನ್ನು ಎತ್ತಿ ತೋರಿಸುವ ಹೆಚ್ಚಿನ ಕಥೆಗಳ ಸೃಷ್ಟಿಗೆ ಪ್ರೇರಣೆಯಾಗಲಿ ಎಂದು ಅವರು ತಿಳಿಸಿದ್ದಾರೆ.* ಚಿತ್ರವು ವಲಸೆ ಬಂದ ನಟಿ ಥೂಯಾ ಅವರ ಬದುಕು, ಅವಳ ಕನಸುಗಳು ಮತ್ತು ಬದುಕು ಕಟ್ಟಿಕೊಳ್ಳುವ ಹೋರಾಟವನ್ನು ಚಿತ್ರಿಸುತ್ತದೆ.* ಬಿಭಾನ್ಶು ರಾಯ್, ರೋಮಿಲ್ ಮೋದಿ ಮತ್ತು ರಂಜನ್ ಸಿಂಗ್ ನಿರ್ಮಿಸಿರುವ ಈ ಚಿತ್ರದಲ್ಲಿ ಭೂಷಣ್ ಶಿಂಪಿ, ರವಿ ಮಾನ್, ಪ್ರೀತಮ್ ಪಿಲಾನಿಯಾ ಮತ್ತು ಲವ್ಲಿ ಸಿಂಗ್ ನಟಿಸಿದ್ದಾರೆ.* ದೇವಜಿತ್ ಸಮಂತ (ಛಾಯಾಗ್ರಹಣ), ಆಶಿಶ್ ಪಟೇಲ್ (ಸಂಕಲನ) ಮತ್ತು ನಿಶಾಂತ್ ರಾಮ್ಟೆಕೆ (ಸಂಗೀತ) ಅವರ ತಾಂತ್ರಿಕ ಕೊಡುಗೆಗಳಿವೆ. ಚಿತ್ರೋತ್ಸವ ಶನಿವಾರ(ಆಗಸ್ಟ್ 06) ಮುಕ್ತಾಯವಾಯಿತು.