Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಅಂಟಾರ್ಟಿಕಾದಲ್ಲಿ ಭಾರತದ ನೂತನ 'ಮೈತ್ರಿ-2' ಸಂಶೋಧನಾ ನೆಲೆ
15 ಅಕ್ಟೋಬರ್ 2025
* ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿರುವ ಭಾರತ ದೇಶವು ಇದೀಗ ಅಂಟಾರ್ಟಿಕಾದಲ್ಲಿ ಹೊಸ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.ಮೈತ್ರಿ-2 ಅಂಟಾರ್ಟಿಕಾದ್ಲಲಿ ಸ್ಥಾಪನೆಯಾಗುತ್ತಿರುವ ಭಾರತದ ನಾಲ್ಕನೇ ಸಂಶೋಧನಾ ಕೇಂದ್ರವಾಗಿದೆ.
* ಅಂಟಾರ್ಟಿಕಾದಲ್ಲಿ ಭಾರತವು ಪ್ರಸ್ತುತ ಮೈತ್ರಿ-2 ಎಂಬ ಹೊಸ ಸಂಶೋಧನಾ ಕೇಂದ್ರವನ್ನು ನಿರ್ಮಿಸಲು ಯೋಚಿಸುತ್ತಿದೆ.ಇದು 2029 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.ಭಾರತದ ಪ್ರಸ್ತುತ ಸಕ್ರಿಯ ಕೇಂದ್ರಗಳೆಂದರೆ ಮೈತ್ರಿ ಮತ್ತು ಭಾರತಿ.ಈ ಹೊಸ ಕೇಂದ್ರವು ಲಾರ್ಸಮನ ಹಿಲ್ಸ್ ಬಳಿ ನಿರ್ಮಾಣಗೊಳ್ಳಲಿದೆ.
* ಮೈತ್ರಿ-2 ಹೊಸ ಯೋಜನೆಯ ಪರಿಕಲ್ಪನೆ:ಪ್ರಸ್ತುತ ಇರುವ ಮೈತ್ರಿ ಕೇಂದ್ರವು ಹಳೆಯದಾಗಿದ್ದು,ಅದನ್ನು ಬದಲಿಸಲು ಹೊಸ ಕೇಂದ್ರ ನಿರ್ಮಾಣ ಅನಿವಾರ್ಯವಾಗಿದೆ.
* ಅಂಟಾರ್ಟಿಕಾವು ಭೂಮಿಯ ಮೇಲೆ ಶೇ.75 ರಷ್ಟು ಸಿಹಿ ನೀರನ್ನ ಹೊಂದಿದೆ ಹಾಗೆಯೆ ಸಮುದ್ರ ಮಟ್ಟದ ಏರಿಕೆಯನ್ನು ತಿಳಿದುಕೊಳ್ಳಲು ಅದರ ಮಂಜುಗಡ್ಡೆಯ ಅಧ್ಯಯನ ತುಂಬಾ ನಿರ್ಣಾಯಕ.
* ಈ ಯೋಜನೆಯ ಪ್ರಾಮುಖ್ಯತೆ:ಬಳಸದ ಖನಿಜ ನಿಕ್ಷೇಪಗಳು,ಸಮುದ್ರ ಜೀವವೈವಿಧ್ಯ ಮತ್ತು ಪರಿಸರ ವಿಜ್ಞಾನದ ಮೂಲಗಳನ್ನು ಅರ್ಥಮಾಡಿಕೊಳ್ಳುವುದು.
* ಹಳೆಯ ಕೇಂದ್ರವು ಮೂಲ ವಿನ್ಯಾಸದ ಜಿವಿತಾವಧಿಯಾದ 10 ವರ್ಷಗಳನ್ನು ಮೀರಿದೆ ಮತ್ತು ದೋಷಪೂರಿತ ತ್ಯಾಜ್ಯ ನಿರ್ವಹಣೆಯಂತಹ ಸಮಸ್ಯೆಗಳನ್ನು ಹೊಂದಿದೆ.
* ಈ ಯೋಜನೆಯನ್ನು ಭೂವಿಜ್ಞಾನ ಸಚಿವಾಲಯ ಅಧೀನದಲ್ಲಿರುವ ಗೋವಾದ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ ಮೇಲ್ವಿಚಾರಣೆ ಮಾಡುತ್ತಿದೆ.
* ಈ ಸಂಶೋಧನೆಯನ್ನು ಹಳೆಯ ಮೈತ್ರಿ ಕೇಂದ್ರಕ್ಕೆ ಪರ್ಯಾಯವಾಗಿ 1989 ರಲ್ಲಿ ನಿರ್ಮಿಸಲಾಗುತ್ತಿದೆ.ಮೈತ್ರಿ-2 ಸಂಶೋಧನಾ ಕೇಂದ್ರವು ಪೂರ್ವ ಅಂಟಾರ್ಟಿಕಾದಲ್ಲಿ ನೆಲೆಗೊಳ್ಳಲಿದೆ.
* ಭಾರತವು ಇಲ್ಲಿವರೆಗೆ ಅಂಟಾರ್ಟಿಕಾದಲ್ಲಿ
ಮೂರೂ ಶಾಶ್ವತ ಸಂಶೋಧನಾ ಕೇಂದ್ರ
ಗಳನ್ನು ನಿರ್ಮಿಸಿದೆ.ಅವುಗಳೆಂದರೆ :
ಮೈತ್ರಿ,ಭಾರತಿ,ದಕ್ಷಿಣ
ಗಂಗೋತ್ರಿ
.ಪ್ರಸ್ತುತವಾಗಿ ಮೈತ್ರಿ ಮತ್ತು ಭಾರತಿ ಸಂಶೋಧನಾ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
* ದಕ್ಷಿಣ ಗಂಗೋತ್ರಿ :1983 ರಲ್ಲಿ ಅಂಟಾರ್ಟಿಕಾದಲ್ಲಿ ಭಾರತದ ಮೊದಲ ವೈಜ್ಞಾನಿಕ ಸಂಶೋಧನಾ ನೆಲೆ ದಕ್ಷಿಣ ಗಂಗೋತ್ರಿ ಕೇಂದ್ರವಾಗಿದೆ.ಆದರೆ ಮಂಜುಗಡ್ಡೆಯಲ್ಲಿ ಮುಳುಗಿಹೋಗಿರುವದರಿಂದ 1990 -91 ರಲ್ಲಿ ಕೈಬಿಡಲಾಯಿತು.
* ಮೈತ್ರಿ (1989 ):ಇದು ಭಾರತದ ಎರಡನೇ ಶಾಶ್ವತ ಸಂಶೋಧನಾ ಕೇಂದ್ರವಾಗಿದೆ.ಇದನ್ನು 1989 ರಲ್ಲಿ ಸ್ಥಾಪಿಸಲಾಯಿತು.ಶಿಮೆರ್ಕರ ಓಯಸಿಸ ಎಂಬ ಶೀಲಾ ಪರ್ವತದ ಮೇಲಿದೆ.ಭಾರತವು ಇದರ ಹತ್ತಿರದಲ್ಲಿ ಪ್ರಿಯದರ್ಶಿನಿ ಸರೋವರ ಎಂಬ ಸಿಹಿ ನೀರಿನ ಸರೋವರವನ್ನು ಸಹ ನಿರ್ಮಿಸಿದೆ.
* ಭಾರತಿ (2012 ):ಇದು ಭಾರತದ ಅತ್ಯಂತ ಇತ್ತೀಚಿನ ಮತ್ತು ಆಧುನಿಕ ಕೇಂದ್ರವಾಗಿದೆ.ಇದನ್ನು 2012 ರಲ್ಲಿ ಕಾರ್ಯಾರಂಭಿಸಲಾಯಿತು.ಇದು ಥಾಲಾ ಪ್ರೋರ್ಡಮತ್ತು ಕ್ವಿಲ್ಟಿ ಕೊಲ್ಲಿಯ ನಡುವೆ ಇದೆ.ವರ್ಷ ಪೂರ್ತಿ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳಲು ನೆರವಾಗಿದೆ.
Take Quiz
Loading...