* ಅಂತರಾಷ್ಟ್ರೀಯ ಪುಟ್ ಬಾಲ್ ಆಟಗಾರರನ್ನು ಭಾರತ ದೇಶಕ್ಕೆ ಕೊಡುಗೆಯಾಗಿ ನೀಡಿದ ಖಾನ್ ಕುಟುಂಬದ ಶ್ರೇಷ್ಠ ಫುಟ್ಬಾಲ್ ಆಟಗಾರರಾದ 88 ವರ್ಷ ವಯಸ್ಸಿನ ಅಬ್ದುಲ್ ಲತೀಫ್ ಅವರು ಡಿಸೆಂಬರ್ 12 ರಂದು ಗುವಾಹಟಿಯಲ್ಲಿ ನಿಧನರಾಗಿದ್ದಾರೆ.* ಬೆಂಗಳೂರು ಮುಸ್ಲಿಮ್ಸ್ ತಂಡದಲ್ಲಿ 1953 ಮತ್ತು 54ರಲ್ಲಿ ಆಡಿದ್ದ ಅವರು ಹಲವು ಗೋಲುಗಳನ್ನು ಹೊಡೆದಿದ್ದರು. ಹಾಗೇ 1955ರಲ್ಲಿ ಅವರು ಎಲ್‌ಆರ್‌ಡಿಇ ತಂಡವನ್ನು ಸೇರಿಕೊಂಡರು.ತದನಂತರ ಅವರು ಕೋಲ್ಕತ್ತದ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್‌ನಲ್ಲಿ ಆಡಿದ್ದರು. * 1960ರ ರೋಮ್ ಒಲಿಂಪಿಕ್ ಕೂಟಕ್ಕೆ ಆಯ್ಕೆಯಾಗಿದ್ದ ಅಬ್ದುಲ್ ಲತೀಫ್ ಅವರು ಭಾರತ ತಂಡದ ರಾಷ್ಟ್ರೀಯ ಶಿಬಿರಕ್ಕೂ ಅರ್ಹತೆ ಗಳಿಸಿದ್ದರು.* ಲತೀಫ್ ಖಾನ್ ಅವರು 1962ರಲ್ಲಿ ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಮೈಸೂರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಆ ಸಮಯದಲ್ಲಿ ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಮೈಸೂರು ತಂಡವು ರನ್ನ‌ರ್ ಅಪ್ ಆಗಿ ಹೊರಹೊಮ್ಮಿತ್ತು. ಖಾನ್ ಅವರು ಶ್ರೀಲಂಕಾದಲ್ಲಿ ನಡೆದಿದ್ದ ಪೆಂಟಾಗ್ಯುಲರ್ ಟೂರ್ನಿಯಲ್ಲಿ ಸಹ ಆಡಿದ್ದರು.