* ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧ ನಾಗ್ಪುರ ಏಕದಿನದಲ್ಲಿ 3 ವಿಕೆಟ್ ಪಡೆದು, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 600 ವಿಕೆಟ್ ಕಬಳಿಸಿದ ಐದನೇ ಭಾರತೀಯನಾದರು.* ಅವರು ಕಪಿಲ್ ದೇವ್ ಮತ್ತು ಅನಿಲ್ ಕುಂಬ್ಲೆ ಅವರಿದ್ದ ಎಲೈಟ್ ಕ್ಲಬ್ಗೆ ಸೇರ್ಪಡೆಯಾದರು.* ಟೀಂ ಇಂಡಿಯಾ ಪರ ಈವರೆಗೆ 80 ಟೆಸ್ಟ್, 198 ಏಕದಿನ ಹಾಗೂ 74 ಟಿ20 ಪಂದ್ಯಗಳಲ್ಲಿ ಆಡಿರುವ ಜಡೇಜ ಕ್ರಮವಾಗಿ, 323, 223 ಹಾಗೂ 54 ವಿಕೆಟ್ಗಳನ್ನು ಪಡೆದಿದ್ದಾರೆ.* ಟೆಸ್ಟ್ ಕ್ರಿಕೆಟ್ನಲ್ಲಿ 3,370 ರನ್, ಏಕದಿನದಲ್ಲಿ 2,788 ರನ್ ಹಾಗೂ ಟಿ20ಯಲ್ಲಿ 515 ರನ್ಗಳನ್ನು ಕಲೆಹಾಕಿದ್ದಾರೆ.* ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಮೂರು ವಿಕೆಟ್ಗಳನ್ನು ಪಡೆದ ಜಡೇಜ, ಬ್ಯಾಟಿಂಗ್ ವೇಳೆ ಅಜೇಯ 12 ರನ್ ಸಹ ಗಳಿಸಿದರು.* ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 600 ವಿಕೆಟ್ ಮತ್ತು 6000 ರನ್ ಗಳಿಸಿರುವ ಭಾರತದ ಏಕೈಕ ಸ್ಪಿನ್ನರ್ ಎಂಬ ಹೆಗ್ಗಾಳಿಕೆಗೂ ಇದೀಗ ರವೀದ್ರ ಜಡೇಜಾ ಪಾತ್ರರಾಗಿದ್ದಾರೆ.* ಕನ್ನಡದ ಸ್ಪಿನ್ನರ್ ದಂತಕತೆ ಅನಿಲ್ ಕುಂಬ್ಳೆ 401 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 30.06 ಸರಾಸರಿಯಲ್ಲಿ 953 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.* ವಿಶ್ವ ಕ್ರಿಕೆಟ್ನಲ್ಲಿ ಈವರೆಗೆ ಕೇವಲ ಆರು ಮಂದಿ ಮಾತ್ರ ಈ ಸಾಧನೆ ಮಾಡಿದ್ದಾರೆ. ಅವರುಗಳೆಂದರೆ :1) ಕಪಿಲ್ ದೇವ್: 9,031 ರನ್ ಹಾಗೂ 687 ವಿಕೆಟ್2) ವಾಸಿಂ ಅಕ್ರಮ್: 6,615 ರನ್ ಹಾಗೂ 916 ವಿಕೆಟ್3) ಶಾನ್ ಪೊಲಾಕ್: 8,091 ರನ್ ಹಾಗೂ 829 ವಿಕೆಟ್4) ಶಕೀಬ್ ಅಲ್ ಹಸನ್: 14,730 ರನ್ ಹಾಗೂ 712 ವಿಕೆಟ್5) ಡೆನಿಯಲ್ ವೆಟ್ಟೋರಿ: 6,989 ರನ್ ಹಾಗೂ 705 ವಿಕೆಟ್6) ರವೀಂದ್ರ ಜಡೇಜ: 6,653 ರನ್ ಹಾಗೂ 600 ವಿಕೆಟ್
ಭಾರತ ಪರ 600ಕ್ಕಿಂತ ಹೆಚ್ಚು ವಿಕೆಟ್ ಪಡೆದವರು1) ಅನಿಲ್ ಕುಂಬ್ಳೆ: 956 ವಿಕೆಟ್2) ಆರ್. ಅಶ್ವಿನ್: 765 ವಿಕೆಟ್3) ಹರ್ಭಜನ್ ಸಿಂಗ್:711 ವಿಕೆಟ್4) ಕಪಿಲ್ ದೇವ್: 687 ವಿಕೆಟ್5) ಜಹೀರ್ ಖಾನ್: 610 ವಿಕೆಟ್6) ರವೀಂದ್ರ ಜಡೇಜ: 600 ವಿಕೆಟ್