* ಪ್ರತಿ ವರ್ಷ ಮೇ 18 ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಾಲಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಮೂಲಕ ಇತಿಹಾಸ, ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಿಂದಿನ ಪೀಳಿಗೆಗಳಿಂದ ಬಂದ ವೈಭವ ಹಾಗೂ ಗೌರವವನ್ನು ಮುಂದಿನ ಪೀಳಿಗೆಗಳಿಗೆ ವರ್ಗಾಯಿಸುವ ಉದ್ದೇಶವಿದೆ.* 2025ರ ಅಂತಾರಾಷ್ಟ್ರೀಯ ವಸ್ತು ಸಂಗ್ರಾಲಯ ದಿನದ ಥೀಮ್: "ವೇಗವಾಗಿ ಬದಲಾಗುತ್ತಿರುವ ಸಮುದಾಯಗಳಲ್ಲಿ ವಸ್ತುಸಂಗ್ರಹಾಲಯಗಳ ಭವಿಷ್ಯ" ಎಂಬುದಾಗಿದೆ.* 1977ರಲ್ಲಿ ರಷ್ಯಾದ ಮಾಸ್ಕೊದಲ್ಲಿ ನಡೆದ 'ಇಂಟರ್ ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಂ' (ಐಸಿಒಎಂ) ಸಭೆಯಲ್ಲಿ ಈ ದಿನದ ಆಚರಣೆಗೆ ನಿರ್ಧಾರ ತೆಗೆದುಕೊಳ್ಳಲಾಯಿತು.* ವಸ್ತು ಸಂಗ್ರಹಾಲಯಗಳು ಸಮುದಾಯ ನಿರ್ಮಾಣ, ಸಂಸ್ಕೃತಿ ವಿನಿಮಯ, ರಾಷ್ಟ್ರಾಂತರ ಸಹಕಾರದ ಪ್ರಮುಖ ಕೇಂದ್ರಗಳಾಗಿವೆ. ಇವುಗಳು ಪ್ರತಿಯೊಂದು ಸಮುದಾಯದ ಪರಂಪರೆ ಮತ್ತು ಇತಿಹಾಸವನ್ನು ಸಂಗ್ರಹಿಸಿ, ಸಂರಕ್ಷಿಸುತ್ತವೆ.* ವಸ್ತು ಸಂಗ್ರಹಾಲಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಇತಿಹಾಸ ಅಧ್ಯಯನ ಮತ್ತು ಆವಿಷ್ಕಾರಗಳಿಗೆ ಉತ್ತೇಜನ ನೀಡುವುದು ಈ ದಿನದ ಉದ್ದೇಶವಾಗಿದೆ.* ವಿಶ್ವದಾದ್ಯಂತ ಇವೆಲ್ಲವನ್ನು ಪ್ರೋತ್ಸಾಹಿಸಲು ವಿವಿಧ ವಸ್ತು ಸಂಗ್ರಹಾಲಯಗಳು ಜನರ ಪಾಲ್ಗೊಳ್ಳುವಿಕೆಯನ್ನು ಆಹ್ವಾನಿಸುತ್ತವೆ.