* ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯುವ ಮೂಲಕ ಇಂಟರ್ನ್ಯಾಷನಲ್ ಕೆರಿಯರ್ಗೆ ವಿದಾಯ ಹೇಳುವುದಾಗಿ 37 ವರ್ಷದ ರಸೆಲ್ ಅವರು ತಿಳಿಸಿದ್ದಾರೆ.* ಟಿ20 ಮಾದರಿಯಲ್ಲೇ ಹೆಚ್ಚು ಯಶಸ್ಸು ಗಳಿಸಿರುವ ರಸೆಲ್ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ 2026ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಕೇವಲ ಏಳು ತಿಂಗಳು ಇರುವಂತೆ ಈ ನಿರ್ಧಾರ ಪ್ರಕಟಿಸಿದ್ದಾರೆ. * 2011 ರಲ್ಲಿ ಪಾಕಿಸ್ತಾನ್ ವಿರುದ್ದ ಕಣಕ್ಕಿಳಿಯುವ ಮೂಲಕ ವೆಸ್ಟ್ ಇಂಡೀಸ್ ಪರ ಟಿ20 ಕೆರಿಯರ್ ಆರಂಭಿಸಿದ್ದ ಆ್ಯಂಡ್ರೆ ರಸೆಲ್ ಈವರೆಗೆ 84 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 73 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು 3 ಅರ್ಧಶತಕಗೊಂದಿಗೆ 1078 ರನ್ ಕಲೆಹಾಕಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 61 ವಿಕೆಟ್ ಕಬಳಿಸಿ ಮಿಂಚಿದ್ದಾರೆ.* ವೆಸ್ಟ್ ಇಂಡೀಸ್ ತಂಡದ ಪರ 84 ಟಿ-20 ಪಂದ್ಯಗಳಲ್ಲಿ ಆಡಿರುವ ಆ್ಯಂಡ್ರೆ ರಸೆಲ್, ಈ ಪಂದ್ಯಗಳಲ್ಲಿ ಒಟ್ಟು 1078 ರನ್ ಗಳಿಸಿದ್ದು, 61 ವಿಕೆಟ್ ಗಳನ್ನೂ ಕಿತ್ತಿದ್ದಾರೆ. ಇದಲ್ಲದೆ, 2012 ಹಾಗೂ 2016ರ ಟಿ-20 ವಿಶ್ವಕಪ್ ಗೆದ್ದ ತಂಡದಲ್ಲೂ ಅವರು ಭಾಗವಾಗಿದ್ದರು.