* ಭಾರತ ಮಹಿಳಾ ತಂಡದ ಪರ ಸರ್ವಾಧಿಕ ಪಂದ್ಯ ಆಡಿರುವ ಹೆಗ್ಗಳಿಕೆಯ ವಂದನಾ ಕಟಾರಿಯಾ ಮಂಗಳವಾರ (ಎ.1) ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ 15 ವರ್ಷಗಳ ವರ್ಣರಂಜಿತ ವೃತ್ತೀಜಿವನವನ್ನು ಕೊನೆಗೊಳಿಸಿದ್ದಾರೆ. * ಉತ್ತರಾಖಂಡದ 32 ವರ್ಷದ ಸ್ಟ್ರೆ$ಕರ್ ವಂದನಾ ಭಾರತ ಪರ 320 ಪಂದ್ಯ ಆಡಿದ್ದು, 158 ಗೋಲು ಬಾರಿಸಿದ್ದಾರೆ. 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಪಡೆದ ಭಾರತ ತಂಡದ ಭಾಗವಾಗಿದ್ದರು.* “ಇಂದು ನಾನು ಕೃತಜ್ಞತಾಪೂರ್ವಕ ಹೃದಯದೊಂದಿಗೆ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳುತ್ತಿದ್ದೇನೆ. ಈ ನಿರ್ಧಾರ ಸಿಹಿ&ಕಹಿ ಭಾವನೆಯಿಂದ ಕೂಡಿದೆ. ನನ್ನಲ್ಲಿನ ಹಾಕಿ ಆಟದ ಹಸಿವು ಇಂಗಿರುವುದಕ್ಕೆ ವಿದಾಯ ಹೇಳುತ್ತಿಲ್ಲ. ಬದಲಾಗಿ ನಾನಿನ್ನೂ ಉತ್ತುಂಗದಲ್ಲಿರುವಾಗಲೇ ವಿದಾಯ ಹೇಳಲು ಬಯಸಿದ್ದೇನೆ. * ನನ್ನದೇ ಸ್ವಂತ ಆಯ್ಕೆಯಿಂದ ಅಂತಾರಾಷ್ಟ್ರೀಯ ಮಟ್ಟದಿಂದ ನಿರ್ಗಮಿಸುತ್ತಿದ್ದೇನೆ. ಪ್ರೇಕ್ಷಕರ ಹಷೋರ್ದ್ಗಾರ, ಪ್ರತಿ ಗೋಲಿನ ರೋಮಾಂಚನ ಮತ್ತು ಭಾರತ ತಂಡದ ಜೆರ್ಸಿ ಧರಿಸುವ ಹೆಮ್ಮೆ ಯಾವಾಗಲೂ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಅನುರಣಿಸಲಿದೆ’ ಎಂದು ವಂದನಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.* 2009ರಲ್ಲಿ ಪದಾರ್ಪಣೆ ಮಾಡಿದಂದಿನಿಂದಲೂ ಭಾರತೀಯ ಮಹಿಳಾ ಹಾಕಿ ತಂಡದ ಆಧಾರಸ್ತಂಭ ಎನಿಸಿದ್ದ ವಂದನಾ, ಒಲಿಂಪಿಕ್ಸ್ನಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿದ ಮೊದಲ ಮತ್ತು ಏಕೈಕ ಭಾರತೀಯ ಆಟಗಾರ್ತಿ ಎಂಬ ಸಾಧನೆಯನ್ನು ಟೋಕಿಯೊದಲ್ಲಿ ಮಾಡಿದ್ದರು. 2016ರ ರಿಯೋ ಒಲಿಂಪಿಕ್ಸ್ನಲ್ಲೂ ಅವರು ಆಡಿದ್ದರು. ನನ್ನ ಸ್ಟಿಕ್ಗೆ ಸಂಪೂರ್ಣ ವಿಶ್ರಾಂತಿ ನೀಡುತ್ತಿಲ್ಲ. ಮಹಿಳೆಯರ ಹಾಕಿ ಇಂಡಿಯಾ ಲೀಗ್ನಲ್ಲಿ ಆಡುವುದನ್ನು ಮುಂದುವರಿಸುವೆ ಎಂದು ವಂದನಾ ಸ್ಪಷ್ಟಪಡಿಸಿದ್ದಾರೆ.* ವಂದನಾರ ಅಮೋಘ ವೃತ್ತೀಜಿವನಕ್ಕೆ ಅಭಿನಂದನೆ ಹೇಳಿರುವ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ರ್ಟಿಕಿ, “ವಂದನಾ ಗೋಲು ಸ್ಕೋರರ್ ಮಾತ್ರವಲ್ಲ. ಭಾರತೀಯರ ಆಕ್ರಮಣದ ಹೃದಯಬಡಿತವಾಗಿದ್ದರು. ಅವರ ಉಪಸ್ಥಿತಿ ಫಾರ್ವರ್ಡ್ ವಿಭಾಗದಲ್ಲಿ, ಅದರಲ್ಲೂ ಪ್ರಮುಖವಾಗಿ ಒತ್ತಡದ ಪರಿಸ್ಥಿತಿಯಲ್ಲಿ ಭಾರತಕ್ಕೆ ಮೇಲುಗೈ ತಂದುಕೊಡುತಿತ್ತು. ಜಾಗತಿಕ ಮಟ್ಟದಲ್ಲಿ ಭಾರತೀಯ ಮಹಿಳಾ ಹಾಕಿಯ ಬೆಳವಣಿಗೆಯಲ್ಲಿ ವಂದನಾ ಕೊಡುಗೆ ಪ್ರಮುಖವಾದುದು. ಅವರು ಭವಿಷ್ಯದ ಆಟಗಾರ್ತಿಯರಿಗೆ ಹೊಸ ಮಾನದಂಡವನ್ನು ನಿಗದಿಪಡಿಸಿದ್ದಾರೆ’ ಎಂದಿದ್ದಾರೆ.* 2016, 2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ, 2022ರ ಹಾಕಿ ವುಮೆನ್ಸ್ ನೇಷನ್ಸ್ ಕಪ್ ವಿಜೇತ ಭಾರತ ತಂಡದ ಪ್ರಮುಖ ಭಾಗವಾಗಿದ್ದ ವಂದನಾ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದಾರೆ. 2018ರ ಏಷ್ಯನ್ ಗೇಮ್ಸ್ ಮತ್ತು 2013, 2018ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ರಜತ ಗೆದ್ದ ಭಾರತ ತಂಡದಲ್ಲೂ ಇದ್ದರು. 2022ರ ಕಾಮನ್ವೆಲ್ತ್ ಗೇಮ್ಸ್ ಮತ್ತು 2014, 2022ರ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದರು.* ಹರಿದ್ವಾರದ ರೋಶ್ನಾಬಾದ್ನವರದಾದ ವಂದನಾ, ಕಳೆದ ಫೆಬ್ರವರಿಯಲ್ಲಿ ಎಫ್ಐಎಚ್ ಪ್ರೊ ಲೀಗ್ನಲ್ಲಿ ಭಾರತ ಪರ ಕೊನೇ ಪಂದ್ಯ ಆಡಿದ್ದರು. 2021ರ ಟೋಕಿಯೊ ಒಲಿಂಪಿಕ್ಸ್ ಸೆಮಿಫೈನಲ್ನಲ್ಲಿ ಭಾರತ ಸೋಲು ಕಂಡಾಗ ವಂದನಾ, ದಲಿತರೆಂಬ ಕಾರಣಕ್ಕಾಗಿ ತಮ್ಮ ಊರಿನ ಜನರಿಂದ ನಿಂದನೆಗೂ ಗುರಿಯಾಗಿದ್ದರು.