* ಭಾರತೀಯ ವಾಯುಪಡೆಯ (IMF) ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಫ್ಲೋರಿಡಾದ ಬಾಹ್ಯಾಕಾಶ ನಿಲ್ದಾಣದಿಂದ ಸ್ಪೇಸ್ಎಕ್ಸ್ ಡ್ರಾಗನ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣಿಸಿದ ಮೊದಲ ಭಾರತೀಯ ಗಗನಯಾತ್ರಿಯಾಗಿ ಅವರು ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.* ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಡುವಿನ ಜಂಟಿ ಪ್ರಯತ್ನದ ಭಾಗವಾಗಿ, ಶುಭಾಂಶು ಶುಕ್ಲಾ ಅವರನ್ನು 'ಆಕ್ಸಿಯಂ ಮಿಷನ್-4' ರ ಪೈಲಟ್ ಆಗಿ ನೇಮಿಸಲಾಗಿದೆ.* ಜನವರಿ 30ರಂದು ಅಧಿಕೃತ ಘೋಷಣೆಯು ಹೊರಬಿದ್ದು, ಶುಭಾನ್ಷು ಶುಕ್ಲಾ ಸೇರಿದಂತೆ ನಾಲ್ವರು ಯಾತ್ರಿಗಳನ್ನು ಮಾರ್ಚ್-ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ನಾಸಾ ಮತ್ತು ಪಾಲುದಾರ ರಾಷ್ಟ್ರಗಳು ಇದಕ್ಕೆ ಸಮ್ಮತಿ ನೀಡಿವೆ.* ನಾಲ್ವರೂ ಯಾತ್ರಿಗಳು ಒಟ್ಟು 18 ದಿನಗಳ ಕಾಲ ಅಲ್ಲೇ ಇದ್ದು ವಿವಿಧ ರೀತಿಯ ಸಂಶೋಧನೆ ನಡೆಸಲಿದ್ದಾರೆ. ಈ ಉಡ್ಡಯನಕ್ಕೆ ಅಗತ್ಯವಾದ ತರಬೇತಿಯನ್ನು ಅಮೆರಿಕದಲ್ಲಿ ಪಡೆದುಕೊಂಡಿದ್ದಾರೆ. 'ಆಕ್ಸಿಯಂ" ಎನ್ನುವುದು ಖಾಸಗಿ ಕಂಪನಿಯಾಗಿದ್ದು, ಅದು ಸ್ಪೇಸ್ ಎಕ್ಸ್ ನೌಕೆಯ ಮೂಲಕ ನಾಲ್ವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುತ್ತಿದೆ.