* ಎನ್ಟಿಪಿಸಿ ಸಂಸ್ಥೆ ವಿಜಯಪುರದ ಮಣ್ಣೂರು, ಕೊಪ್ಪಳದ ಕುಕನಪಳ್ಳಿ, ರಾಯಚೂರಿನ ಹಲ್ಕವಟಗಿ ಪ್ರದೇಶಗಳಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ 2024ರ ಏಪ್ರಿಲ್ 10ರಂದು ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ಅಧ್ಯಯನಕ್ಕೆ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಿತ್ತು. ಕೇಂದ್ರ ವಿದ್ಯುತ್ ಸಚಿವರು ಕೂಡ ಈ ಕುರಿತು ಪತ್ರ ಬರೆದುಕೊಂಡಿದ್ದರು.* ಇಂಧನ ಇಲಾಖೆ ಈ ಕುರಿತು ಸಚಿವ ಸಂಪುಟದ ಅನುಮೋದನೆ ಪಡೆಯಲು ಪ್ರಸ್ತಾವ ಸಿದ್ಧಪಡಿಸಿದ್ದು, ಮುಖ್ಯ ಕಾರ್ಯದರ್ಶಿಯ ನಿರ್ದೇಶನದಂತೆ ಭೂಮಿ ಲಭ್ಯತೆ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲು ಕಂದಾಯ ಇಲಾಖೆಗೆ ಪತ್ರ ಬರೆದಿದೆ.* ಮಣ್ಣೂರಿನ 1,200 ಎಕರೆ ಭೂಮಿ ಖಾಸಗಿ ಸಾಗುವಳಿಯಾಗಿದೆ ಎಂಬ ಮಾಹಿತಿ ಲಭ್ಯವಿದೆ.* 2,000 ರಿಂದ 6,000 ಮೆಗಾವಾಟ್ ಸಾಮರ್ಥ್ಯದ ಸ್ಥಾವರಕ್ಕಾಗಿ ಕ್ರಮವಾಗಿ 1,200 ರಿಂದ 2,000 ಎಕರೆ ಭೂಮಿ ಅಗತ್ಯವಿದೆ. ಜೊತೆಗೆ ಕಾಲೊನಿ ಸ್ಥಾಪನೆಗೆ 100-150 ಎಕರೆ ಹಾಗೂ 2 ರಿಂದ 6 ಟಿಎಂಸಿ ನೀರಿನ ಅಗತ್ಯವಿದೆ. ವಿದ್ಯುತ್ ದರ ಪ್ರತಿ ಯೂನಿಟ್ ₹6.50-₹7.50 ಇರಲಿದೆ.* ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯಂತೆ ಭೂಕಂಪನ, ದೋಷರೇಖೆ, ಸೈನಿಕ ಸ್ಥಳಗಳು, ವಿಮಾನ ನಿಲ್ದಾಣಗಳು ಹಾಗೂ ಜನಸಂಖ್ಯೆ ದಟ್ಟತೆ ಆಧಾರಿತವಾಗಿ ಸ್ಥಳದ ಪಾಸಾಗುವಿಕೆ ಪರಿಶೀಲಿಸಲಾಗುವುದು.* ಪ್ರಸ್ತಾವಿತ ಸ್ಥಾವರವನ್ನು ಸ್ಥಾಪಿಸಲು 10ರಿಂದ 13 ವರ್ಷಗಳ ಕಾಲ ಅವಧಿ ಅಗತ್ಯವಿದ್ದು, ಇದು ಬಹುಪಾಲು ಸ್ಥಿರ ದರದಲ್ಲಿ ವಿದ್ಯುತ್ ನೀಡಲಿರುವುದಾಗಿ ತಿಳಿಸಲಾಗಿದೆ.* ಉಷ್ಣ ವಿದ್ಯುತ್ ತಂತ್ರಜ್ಞಾನ ದುರ್ಲಭವಾಗುತ್ತಿರುವ ಹಿನ್ನೆಲೆಯಲ್ಲಿ ಪರಮಾಣು ಶಕ್ತಿ ಅವಶ್ಯಕತೆ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಅಣು ಸ್ಥಾವರ ಸ್ಥಾಪನೆಯಿಂದ ಶೇ. 50ರಷ್ಟು ಉತ್ಪಾದನೆಯು ತವರು ರಾಜ್ಯಕ್ಕೆ ಲಭಿಸುವದು, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಿಎಸ್ಆರ್ ಚಟುವಟಿಕೆಗಳ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸಾಧ್ಯ ಎನ್ನಲಾಗಿದೆ.