Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಭಾರತೀಯ ನೌಕಾಪಡೆಗೆ ‘ಡಾಲ್ಫಿನ್ ಹಂಟರ್’ ಐಎನ್ಎಸ್ ಅಂಜದೀಪ್ ಸೇರ್ಪಡೆ
Authored by:
Akshata Halli
Date:
28 ಫೆಬ್ರುವರಿ 2026
➤
ಭಾರತೀಯ ನೌಕಾಪಡೆಯು ತನ್ನ ಕರಾವಳಿ ಕಣ್ಣಾವಲು ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಫೆಬ್ರವರಿ 27, 2026 ರಂದು ಚೆನ್ನೈ ಬಂದರಿನಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ನೌಕಾಪಡೆಯ ಮುಖ್ಯಸ್ಥ
ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ
ಅವರು
ಐಎನ್ಎಸ್ ಅಂಜದೀಪ್ (INS Anjadip)
ಅನ್ನು ನೌಕಾಪಡೆಗೆ ಲೋಕಾರ್ಪಣೆ ಮಾಡಿದರು.
➤
ಐಎನ್ಎಸ್ ಅಂಜದೀಪ್:
ಇದು 'ಆಳವಿಲ್ಲದ ನೀರಿನ ಜಲಾಂತರ್ಗಾಮಿ ವಿರೋಧಿ ಯುದ್ಧ ನೌಕೆ' (
ASW-SWC
) ಯೋಜನೆಯಡಿ ನಿರ್ಮಿಸಲಾದ ಎಂಟು ನೌಕೆಗಳಲ್ಲಿ ಮೂರನೆಯದ್ದಾಗಿದೆ. ಸಮುದ್ರದ ಆಳವಿಲ್ಲದ ಕರಾವಳಿ ಭಾಗದಲ್ಲಿ ಅವಿತಿರುವ ಶತ್ರು ರಾಷ್ಟ್ರಗಳ ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ನಾಶಪಡಿಸುವ ವಿಶೇಷ ಸಾಮರ್ಥ್ಯವನ್ನು ಇದು ಹೊಂದಿದೆ.
➤
ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಡಿ ನಿರ್ಮಾಣವಾಗಿರುವ
ಐಎನ್ಎಸ್ ಅಂಜದೀಪ್
, ಕೋಲ್ಕತ್ತಾದ
GRSE
ಸಂಸ್ಥೆಯ ಕೊಡುಗೆಯಾಗಿದೆ. 77 ಮೀಟರ್ ಉದ್ದವಿರುವ ಈ ನೌಕೆಯು ಸುಧಾರಿತ
ವಾಟರ್-ಜೆಟ್ ಪ್ರೊಪಲ್ಷನ್
ವ್ಯವಸ್ಥೆಯನ್ನು ಹೊಂದಿದ್ದು, ಗಂಟೆಗೆ
25 ನಾಟ್ಸ್
ವೇಗದಲ್ಲಿ ಕಿರಿದಾದ ಕರಾವಳಿ ಪ್ರದೇಶಗಳಲ್ಲಿ ಚಲಿಸಬಲ್ಲದು. ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಲು ಇದರಲ್ಲಿ ಸ್ವದೇಶಿ ನಿರ್ಮಿತ
'ಅಭಯ್' ಸೋನಾರ್
ಅಳವಡಿಸಲಾಗಿದ್ದು, ರಕ್ಷಣೆಗಾಗಿ ಲಘು ತೂಕದ ಟಾರ್ಪಿಡೊಗಳು, ಎಎಸ್ಡಬ್ಲ್ಯೂ ರಾಕೆಟ್ಗಳು ಮತ್ತು ಸುಧಾರಿತ ಮೈನ್-ಲೇಯಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.
➤
ಐಎನ್ಎಸ್ ಅಂಜದೀಪ್ ಅನ್ನು
“ಡಾಲ್ಫಿನ್ ಹಂಟರ್”
(Dolphin Hunter) ಎಂದು ಕರೆಯಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಇದರಲ್ಲಿರುವ 'ಅಭಯ್' ಸೋನಾರ್ ವ್ಯವಸ್ಥೆಯು ಡಾಲ್ಫಿನ್ಗಳು ಬಳಸುವ ಅಕೌಸ್ಟಿಕ್ (ಧ್ವನಿ ತರಂಗ) ತತ್ವದಂತೆಯೇ ಕಾರ್ಯನಿರ್ವಹಿಸುತ್ತದೆ. ಇದು ಸಮುದ್ರದ ತಳಭಾಗದಲ್ಲಿ ಸದ್ದಿಲ್ಲದೆ ಅಡಗಿರುವ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿಗಳನ್ನು ಸಹ ನಿಖರವಾಗಿ ಪತ್ತೆಹಚ್ಚಬಲ್ಲದು.
➤
ಈ ನೌಕೆಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿಯಲ್ಲಿರುವ
ಅಂಜದೀಪ್ ದ್ವೀಪ
ದ ಹೆಸರನ್ನು ಇಡಲಾಗಿದೆ. 1961 ರ 'ಆಪರೇಷನ್ ಚಟ್ನಿ' (ಗೋವಾ ವಿಮೋಚನಾ ಚಳುವಳಿಯ ಭಾಗ) ಸಮಯದಲ್ಲಿ ಈ ದ್ವೀಪವು ವ್ಯೂಹಾತ್ಮಕವಾಗಿ ಪ್ರಮುಖ ಪಾತ್ರ ವಹಿಸಿತ್ತು. ಹಳೆಯ ಐಎನ್ಎಸ್ ಅಂಜದೀಪ್ (ಪೆಟ್ಯಾ ಕ್ಲಾಸ್ ಕಾರ್ವೆಟ್) 1972 ರಿಂದ 2003 ರವರೆಗೆ ಸೇವೆ ಸಲ್ಲಿಸಿತ್ತು. ಈಗ ಅದೇ ಹೆಸರಿನಲ್ಲಿ ನವೀನ ತಂತ್ರಜ್ಞಾನದೊಂದಿಗೆ ಈ ನೌಕೆ ಮರುಜನ್ಮ ಪಡೆದಿದೆ.
➤
ಕಾರ್ಯನಿರ್ವಹಣೆಯ ಜವಾಬ್ದಾರಿಗಳು:
ಕೇವಲ ಜಲಾಂತರ್ಗಾಮಿಗಳ ಬೇಟೆಯಾಡುವುದು ಮಾತ್ರವಲ್ಲದೆ, ಈ ನೌಕೆಯು ಇತರೆ ಬಹುಮುಖಿ ಪಾತ್ರಗಳನ್ನು ನಿರ್ವಹಿಸಲಿದೆ:
- ಕರಾವಳಿ ಕಣ್ಣಾವಲು:
ಶತ್ರುಗಳ ನುಸುಳುವಿಕೆ ತಡೆಯುವುದು.
- ಶೋಧ ಮತ್ತು ರಕ್ಷಣೆ (SAR):
ಸಮುದ್ರದಲ್ಲಿ ಸಂಕಷ್ಟಕ್ಕೀಡಾದವರ ನೆರವಿಗೆ ಧಾವಿಸುವುದು.
- ಮೈನ್ ಅಳವಡಿಕೆ:
ಸಮುದ್ರ ಮಾರ್ಗಗಳಲ್ಲಿ ಮೈನ್ಗಳನ್ನು ಅಳವಡಿಸುವ ಮೂಲಕ ಶತ್ರು ನೌಕೆಗಳನ್ನು ತಡೆಯುವುದು.
➤
2026 ರ ಗುರಿ: ಭಾರತೀಯ ನೌಕಾಪಡೆಯು 2026 ರಲ್ಲಿ ಒಟ್ಟು 19 ಯುದ್ಧನೌಕೆಗಳನ್ನು ಸೇರ್ಪಡೆಗೊಳಿಸುವ ಗುರಿ ಹೊಂದಿದೆ (ಇದು ಇತಿಹಾಸದಲ್ಲೇ ಗರಿಷ್ಠ).
Take Quiz
Loading...