* ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿರುವ ರಾಜ್ಯದ 18 ಭೌಗೋಳಿಕ ಪ್ರದೇಶಗಳಲ್ಲಿ ನಗರ ಅನಿಲ ವಿತರಣೆಗೆ 8 ಸಂಸ್ಥೆಗಳ ನೇಮಕವಾಗಿರುವುದಾಗಿ ಸಚಿವ ಎಂ.ಬಿ. ಪಾಟೀಲ ಹೇಳಿದರು.* ನಗರ ಅನಿಲ ವಿತರಣೆ ಸಂಸ್ಥೆಗಳು ಗೃಹ, ವಾಣಿಜ್ಯ, ಕೈಗಾರಿಕಾ ಬಳಕೆ ಹಾಗೂ ಸಿ.ಎನ್.ಜಿ. ಸ್ಟೇಷನ್ಗಳ ಮೂಲಕ ವಾಹನಗಳಿಗೆ ಇಂಧನ ಪೂರೈಕೆ ಜವಾಬ್ದಾರಿ ಹೊಂದಿವೆ ಎಂದು ವಿಧಾನ ಪರಿಷತ್ತಿನಲ್ಲಿ ಸಚಿವರು ತಿಳಿಸಿದರು.* ಭಾರತ ಸರ್ಕಾರವು ಸಿ.ಜಿ.ಡಿ ಯೋಜನೆಗಳನ್ನು ಸಾರ್ವಜನಿಕ ಉಪಯುಕ್ತ ಯೋಜನೆಗಳಾಗಿ ಪರಿಗಣಿಸಿದ್ದು, ಇದು ಗೃಹ ಬಳಕೆ, ವಾಹನ ಇಂಧನ, ಹಾಗೂ ಸುಸ್ಥಿರ ಕೈಗಾರಿಕಾ ಬೆಳವಣಿಗೆಗೆ ಸಹಾಯಕವಾಗಿದೆ.* ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮಂತ್ರಾಲಯದ ಕಾರ್ಯದರ್ಶಿ ಸಿಜಿಡಿ ವಲಯದ ವೇಗವಾದ ಅಭಿವೃದ್ಧಿಗಾಗಿ ನೀತಿ ರಚಿಸಲು ವಿನಂತಿಸಿದ್ದಾರೆ. ಇದರಲ್ಲಿ ರಸ್ತೆ ಪುನರ್ ಸ್ಥಾಪನೆ / ಅನುಮತಿ ಶುಲ್ಕ ಸೇರಿದಂತೆ ರಾಜ್ಯಗಳ ಬೆಸ್ಟ್ ಪ್ರಾಕ್ಟೀಸ್ಗಳನ್ನು ಉಲ್ಲೇಖಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಪ್ರತಿ ಕಿ.ಮೀ.ಗೆ ರೂ 1000/- ಅನುಮತಿ ಶುಲ್ಕವಿರುವುದು ಪಟ್ಟಿ ಮಾಡಲಾಗಿದೆ.* ಸಿ.ಜಿ.ಡಿ ನೀತಿಯ ತ್ವರಿತ ಅನುಷ್ಠಾನಕ್ಕಾಗಿ ವಿಳಂಬ ತಪ್ಪಿಸಬೇಕೆಂದು ಪಿ.ಎನ್.ಜಿ.ಆರ್.ಬಿ 2021 ಸೆಪ್ಟೆಂಬರ್ 15ರ ಪತ್ರದಲ್ಲಿ ವಿನಂತಿಸಿದೆ. ಪೆಟ್ರೋಲಿಯಂ ಸಚಿವರು 2021 ಅಕ್ಟೋಬರ್ 02ರ ಪತ್ರದ ಮೂಲಕ ರಸ್ತೆ ಮರುಸ್ಥಾಪನೆ ಮತ್ತು ಅನುಮತಿ ಶುಲ್ಕ ಪ್ರಮಾಣೀಕರಣದೊಂದಿಗೆ ರಾಜ್ಯ ಸರ್ಕಾರದ ಬೆಂಬಲ ಕೋರಿದ್ದಾರೆ. ಕರ್ನಾಟಕದಲ್ಲಿ ಹಸಿರು ಪರಿಸರ ಹಾಗೂ ಅನಿಲ ಆಧಾರಿತ ಆರ್ಥಿಕತೆಗೆ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.* ರಾಜ್ಯದ ಸಿಜಿಡಿ ಮತ್ತು ಪೈಪ್ ಲೈನ್ ಅನಿಲ ವಿತರಣಾ ಜಾಲದ ಅಭಿವೃದ್ಧಿಗಾಗಿ ಪ್ರಗತಿಪರ ಉಪಕ್ರಮಗಳ ಆಧಾರದಲ್ಲಿ ನೀತಿಯನ್ನು ರಚಿಸಲಾಗಿದೆ.* ನಗರ ಅನಿಲ ವಿತರಣಾ ಸಂಸ್ಥೆಗಳು ತಮ್ಮ ಭೌಗೋಳಿಕ ಪ್ರದೇಶಗಳಲ್ಲಿ ಸಿಜಿಡಿ ಹಾಗೂ ಅನುಮತಿ ಶುಲ್ಕಗಳ ಕಡಿತದ ಲಾಭವನ್ನು ಸಾರ್ವಜನಿಕರಿಗೆ ವರ್ಗಾಯಿಸುವಂತೆ ನೀತಿಯಲ್ಲಿನ ಷರತ್ತಿನಲ್ಲಿ ಸೇರಿಸಲಾಗಿದೆ.* ಪೆಟ್ರೋಲಿಯಂ ಸಚಿವಾಲಯವು 2023ರ ನವೆಂಬರ್ 8ರಂದು ಈ ನೀತಿಯ ಅನುಷ್ಠಾನಕ್ಕೆ ಆದೇಶಿಸಿದೆ, ಇದರಿಂದ ಅನಿಲ ಪೈಪ್ ಅಳವಡಿಕೆ ಮತ್ತು ಮೇಲ್ವಿಚಾರಣಾ ಶುಲ್ಕ ರೂ.1/-ಕ್ಕೆ ಇಳಿಸಲಾಗುತ್ತದೆ. ಲಾಭವನ್ನು ಯಾವುದೇ ಸಿಜಿಡಿ ಸಂಸ್ಥೆ ಉಳಿಸಿಕೊಳ್ಳದೆ ಸಾರ್ವಜನಿಕರಿಗೆ ವರ್ಗಾಯಿಸಲು ಈ ಕ್ರಮ ಅನುಕೂಲ ಮಾಡಲಿದೆ.* ರಾಜ್ಯ ನಗರ ಅನಿಲ ವಿತರಣೆ (CGD) ನೀತಿಗೆ ಆರ್ಥಿಕ ಇಲಾಖೆಯೂ ಸಹಮತಿಯನ್ನು ನೀಡಿದ್ದು, ಸಂಬಂಧಿತ ಎಲ್ಲ ಇಲಾಖೆಗಳ ಸಮಾಲೋಚನೆಯ ನಂತರ ಸಚಿವ ಸಂಪುಟ ಅನುಮೋದನೆಗೆ ನಿರೀಕ್ಷೆಯಾಗಿದೆ.