* ಅನೀಶ್ ದಯಾಳ್ ಸಿಂಗ್ ಅವರನ್ನು ಪ್ರಧಾನ ಮಂತ್ರಿಯ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಿಸಲಾಗಿದೆ.* ಇದೇ ವೇಳೆ, ಭಟ್ಟಾಚಾರ್ಯ ಅವರನ್ನು ಕೇಂದ್ರ ಮಂಡಳಿಗೆ ನೇಮಿಸಲಾಗಿದೆ. ಅವರು 2009–2014 ರವರೆಗೆ ಕತಾರ್ ಸೆಂಟ್ರಲ್ ಬ್ಯಾಂಕ್ನಲ್ಲಿ ಆರ್ಥಿಕ ತಜ್ಞರಾಗಿದ್ದರು.* ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.* ಅವರ ಸಂಶೋಧನಾ ಆಸಕ್ತಿಗಳು ಹಣಕಾಸು ಮಾರುಕಟ್ಟೆ, ವಿತ್ತೀಯ ನೀತಿ ಮತ್ತು ಮಾರುಕಟ್ಟೆ ಸೂಕ್ಷ್ಮ ರಚನೆಗೆ ಸಂಬಂಧಿಸಿದ್ದಾಗಿದೆ. ಈ ವಿಷಯಗಳಲ್ಲಿ ಅವರು ಹಲವು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.* ಸಭೆಯಲ್ಲಿ ಮಂಡಳಿ ಜಾಗತಿಕ ಮತ್ತು ದೇಶೀಯ ಆರ್ಥಿಕ ಬೆಳವಣಿಗೆಗಳು, ಭೌಗೋಳಿಕ ರಾಜಕೀಯ ಹಾಗೂ ಹಣಕಾಸು ಮಾರುಕಟ್ಟೆಗಳ ಸವಾಲುಗಳನ್ನು ಪರಿಶೀಲಿಸಿತು.* ಆಯ್ದ ಕೇಂದ್ರ ಕಚೇರಿ ಇಲಾಖೆಗಳ ಕಾರ್ಯವೈಖರಿಯನ್ನು ವಿಮರ್ಶಿಸಲಾಯಿತು. ಸಭೆಯಲ್ಲಿ ಆರ್ಬಿಐ ಉಪ ಗವರ್ನರ್ಗಳು ಹಾಗೂ ಇತರ ನಿರ್ದೇಶಕರು ಭಾಗವಹಿಸಿದ್ದರು.