* ಅಂಡಮಾನ್ ದ್ವೀಪದ ಬಳಿ ತೈಲ ನಿಕ್ಷೇಪ ಪತ್ತೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ (OIL) ತಿಳಿಸಿದೆ. ಆದರೆ ಪತ್ತೆಯಾದ ನಿಕ್ಷೇಪದ ಪ್ರಮಾಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.* ಈ ನಿಕ್ಷೇಪವು ಅಂಡಮಾನ್ ಸಮುದ್ರ ಪ್ರದೇಶದ ವಿಜಯಪುರಂ–2ರ ಎರಡನೇ ಬಾವಿಯಲ್ಲಿ ಪತ್ತೆಯಾಗಿದೆ. ಈ ಸಂಶೋಧನೆಗೆ OIL ಜೊತೆಗೆ ಓಎನ್ಜಿಸಿ (ONGC) ಸಹ ಪಾಲುದಾರ ಸಂಸ್ಥೆಯಾಗಿದೆ.* ಈ ವರ್ಷದ ಮಾರ್ಚ್ನಲ್ಲಿ ONGC ಕೂಡ ಅಂಡಮಾನ್ ಸಮುದ್ರದಲ್ಲಿ ಸಂಶೋಧನೆ ನಡೆಸಿತ್ತು, ಆದರೆ ಅದರ ಫಲಿತಾಂಶ ಇನ್ನೂ ಸ್ಪಷ್ಟವಾಗಿಲ್ಲ.* ಕೇಂದ್ರ ತೈಲ ಸಚಿವ ಹರದೀಪ್ ಸಿಂಗ್ ಪುರಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ, ಅಂಡಮಾನ್ ದ್ವೀಪದ ಪೂರ್ವ ಕರಾವಳಿಯಿಂದ ಸುಮಾರು 17 ಕಿ.ಮೀ ದೂರದಲ್ಲಿ ತೈಲ ನಿಕ್ಷೇಪ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.