* ಅಂಡಮಾನ್ ಸಮುದ್ರದಲ್ಲಿ ಸುಮಾರು 1,84,440 ಕೋಟಿ ಲೀಟರ್ ಕಚ್ಛಾ ತೈಲ ಸಂಗ್ರಹ ಇರುವುದು ಸಾಧ್ಯವೆಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.* ಇದು ಸುಮಾರು 11.6 ಬಿಲಿಯನ್ ಬ್ಯಾರಲ್ ಆಗಿದ್ದು, ಗಯಾನದಲ್ಲಿ ಸಿಕ್ಕ ನಿಕ್ಷೇಪದಷ್ಟೇ ದೊಡ್ಡದಾಗಿದೆ.* ಈ ತೈಲ ನಿಕ್ಷೇಪವು ಭಾರತವನ್ನು 20 ಟ್ರಿಲಿಯನ್ ಡಾಲರ್ ಜಿಡಿಪಿಗೆ ಕರೆದೊಯ್ಯುವ ಶಕ್ತಿಯಿದೆ ಎಂದು ಅವರು ಹೇಳಿದರು.* ಭಾರತ ಶೇ. 90ಕ್ಕೂ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ಈ ನಿಕ್ಷೇಪದಿಂದ ಆಮದು ಅವಲಂಬನೆ ಕಡಿಮೆಯಾಗಬಹುದು.* ತೈಲ ಸುಳಿವುಗಳು ಇತ್ತೀಚಿನ ಅನ್ವೇಷಣೆಯಲ್ಲಿ ಪತ್ತೆಯಾಗಿವೆ. ಇದರಿಂದಾಗಿ ಅಂಡಮಾನ್ ಸಮುದ್ರದ ಅಡಿಯಲ್ಲಿದೆಂಬ ವಿಶ್ವಾಸ ಮೂಡಿದೆ. ಆದರೆ ನಿಖರ ತೈಲ ಪತ್ತೆಗೆ ಬೃಹತ್ ವೆಚ್ಚ ಮತ್ತು ಶ್ರಮ ಬೇಕಾಗುತ್ತದೆ. ಗಯಾನದಲ್ಲಿ 41 ಬಾವಿ ಕೊರೆದು ತೈಲ ಸಿಕ್ಕಿತ್ತು.* ಇದಿಲ್ಲದೆ, ಅಸ್ಸಾಮ್, ಗುಜರಾತ್, ರಾಜಸ್ಥಾನ, ಮುಂಬೈ, ಆಂಧ್ರ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ತೈಲ ನಿಕ್ಷೇಪಗಳು ಇವೆ. * ಪಡೂರ್, ಮಂಗಳೂರು, ವಿಶಾಖಪಟ್ಟಣದಲ್ಲೂ ರಿಸರ್ವ್ಸ್ ಇದೆ. ಒಎನ್ಜಿಸಿ ಮತ್ತು ಆಯಿಲ್ ಇಂಡಿಯಾ ಸಂಸ್ಥೆಗಳು ಇದರಲ್ಲಿ ನಿರತರಾಗಿವೆ.