* ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ವರಕವಿ ಡಾ.ದ ರಾ ಬೇಂದ್ರೆಯವರ 128ನೆಯ ಜನ್ಮದಿನದಂದು ನೀಡುವ 2024ನೇ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಬೆಂಗಳೂರಿನ ಖ್ಯಾತ ವಿಮರ್ಶಕರಾದ ಡಾ ಬಸವರಾಜ ಕಲ್ಲುಡಿ ಆಯ್ಕೆಯಾಗಿದ್ದಾರೆ.* ಡಾ.ದ.ರಾ.ಬೇಂದ್ರ ಸಾಹಿತ್ಯಾಭ್ಯಾಸಿಗರಾದ, ಹಿರಿಯ ವಿಮರ್ಶಕರು, ಸಂಶೋಧಕರಾದ ಪ್ರೊ.ಬಸವರಾಜ ಕಲ್ಲುಡಿಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಗೌರವಿಸಲಾಯಿತು.* ಈ ಪ್ರಶಸ್ತಿಯು ರೂ.1.00 ಲಕ್ಷ ನಗದು ಬಹುಮಾನ ಮತ್ತುಪ್ರಶಸ್ತಿ ಫಲಕ, ಫಲ-ಪುಷ್ಪವನ್ನೊಳಗೊಂಡಿದೆ.* 31.01.2024 ರಂದು ಸಂಜೆ 4.30ಕ್ಕೆ ನಗರದ ಡಾ.ದ.ರಾ.ಬೇಂದ್ರೆ ಭವನದಲ್ಲಿ ಜರುಗುವ ಡಾ.ದ.ರಾ ಬೇಂದ್ರೆಯವರ 128ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷರಾದ ಡಾ.ಡಿ.ಎಂ.ಹಿರೇಮಠರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.