* ಹುರುನ್ ವರದಿ ಪ್ರಕಾರ, ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕುಟುಂಬದ ಆಸ್ತಿ 28 ಲಕ್ಷ ಕೋಟಿ ರೂ. ತಲುಪಿದ್ದು, ಇದು ಅದಾನಿ ಕುಟುಂಬದ (14.01 ಲಕ್ಷ ಕೋಟಿ) ಸಂಪತ್ತಿಗಿಂತ ಎರಡು ಪಟ್ಟು ಹೆಚ್ಚಾಗಿದೆ.* ಭಾರತದ 300 ಶ್ರೀಮಂತ ಕುಟುಂಬಗಳ ಒಟ್ಟು ಆಸ್ತಿ 140 ಲಕ್ಷ ಕೋಟಿಗೂ ಹೆಚ್ಚು, ಇದು ದೇಶದ ಜಿಡಿಪಿಗಿಂತ 40% ಹೆಚ್ಚು. ಅಂಬಾನಿ ಕುಟುಂಬದ ಆಸ್ತಿಯೇ ಜಿಡಿಪಿಯ 12% ಇದೆ.* ಕಳೆದ ವರ್ಷ ಅಂಬಾನಿ ಕುಟುಂಬದ ಆಸ್ತಿ 10% ಹೆಚ್ಚಳ ಕಂಡಿದೆ. ಕುಮಾರ್ ಮಂಗಳಂ ಬಿರ್ಲಾ ಕುಟುಂಬದ ಆಸ್ತಿ 20% ಏರಿ 6.47 ಲಕ್ಷ ಕೋಟಿಗೆ, ಜಿಂದಾಲ್ ಕುಟುಂಬದ ಆಸ್ತಿ 21% ಏರಿ 5.70 ಲಕ್ಷ ಕೋಟಿಗೆ ತಲುಪಿದೆ. ಬಜಾಜ್ ಕುಟುಂಬದ ಆಸ್ತಿ ಮಾತ್ರ 21% ಕುಸಿದು 5.6 ಲಕ್ಷ ಕೋಟಿಗಿಳಿದಿದೆ.* ಬೆಂಗಳೂರು ನಗರದಲ್ಲಿ ಭಾರತದ 300 ಶ್ರೀಮಂತ ಕುಟುಂಬಗಳಲ್ಲಿ 10 ಕುಟುಂಬಗಳು ವಾಸಿಸುತ್ತಿವೆ. ಇವುಗಳಲ್ಲಿ ವಿಪ್ರೋ ಮಾಲೀಕತ್ವದ ಪ್ರೇಂಜಿ ಕುಟುಂಬವು ನಗರದ ಶ್ರೀಮಂತ ಕುಟುಂಬವಾಗಿದ್ದು, ದೇಶದ 8ನೇ ಸ್ಥಾನದಲ್ಲಿದೆ. ಇವರ ಆಸ್ತಿ ಮೌಲ್ಯ 2.27 ಲಕ್ಷ ಕೋಟಿ ರೂ. ಆಗಿದೆ.