* ಬಾಹ್ಯಾಕಾಶ ಮತ್ತು ಚಿಪ್ ತಯಾರಿಕೆಯಲ್ಲಿ ಚೀನ ಪಾರಮ್ಯ ಸಾಧಿಸುತ್ತಿದ್ದು, ದೇಶದಲ್ಲಿನ ಅಮೂಲ್ಯ ಖನಿಜಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಆರಂಭಿಸಿದೆ.* ನ್ಯಾಷನಲ್ ಕ್ರಿಟಿಕಲ್ ಮಿನರಲ್ ಮಿಷನ್ಗೆ ₹16,300 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಿಷನ್ನಡಿ ಮುಂದಿನ ಏಳು ವರ್ಷಗಳಲ್ಲಿ ಅಮೂಲ್ಯ ಖನಿಜಗಳ ಅಭಿವೃದ್ಧಿ ಮತ್ತು ಸ್ವಾವಲಂಬನೆಗಾಗಿ ₹34,300 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ.* ಸರ್ಕಾರ 2024–25 ಬಜೆಟ್ನಲ್ಲಿ ಘೋಷಿಸಿದ ಮಿಷನ್ ಅಡಿಯಲ್ಲಿ 24 ಅಮೂಲ್ಯ ಖನಿಜಗಳನ್ನು ಗುರುತಿಸಿದೆ. ಹಸಿರು ಶಕ್ತಿ ಪರಿವರ್ತನೆಗೆ ಸ್ವಾವಲಂಬನೆ ಸಾಧಿಸಲು ಈ ಖನಿಜಗಳ ಪರಿಶೋಧನೆಗೆ ಆರ್ಥಿಕ ನೆರವು ಒದಗಿಸಲಾಗುವುದು.* ಕೇಂದ್ರ ಖನಿಜಗಳ ಸಚಿವಾಲಯವು ತಾಮ್ರ, ಲಿಥಿಯಂ, ನಿಕ್ಕಲ್, ಕೋಬಾಲ್ಟ್ ಸೇರಿದಂತೆ ಅಪರೂಪದ ಖನಿಜಗಳು ನವೀಕರಿಸಬಹುದಾದ ಇಂಧನ ಉತ್ಪಾದನೆ, ವಿಂಡ್ ಟರ್ಬೈನ್, ಇ.ವಿ. ವಾಹನ ಮತ್ತು ಬ್ಯಾಟರಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದೆ.* ಈ ಖನಿಜಗಳ ಪರಿಶೋಧನೆಗೆ ನೆರವು ಸಿಗಲಿದೆ. ಆಮದು ಅವಲಂಬನೆ ಕಡಿಮೆ ಮಾಡಲು ಗುರಿ ಹೊಂದಿದೆ.* ಸಾಗರೋತ್ತರ ಪ್ರದೇಶಗಳಲ್ಲಿ ಖನಿಜ ಪ್ರದೇಶಗಳ ಸ್ವಾಧೀನ, ಸಂಸ್ಕರಣೆ ಮತ್ತು ಮರುಬಳಕೆಗೆ ತಂತ್ರಜ್ಞಾನ ಅಭಿವೃದ್ಧಿ ಸೇರಿದಂತೆ ಸಮಗ್ರ ಯೋಜನೆ ಸಿದ್ಧಪಡಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.* ಸಾರ್ವಜನಿಕ ಉದ್ದಿಮೆಗಳು ಈ ಮಿಷನ್ಗೆ ₹18 ಸಾವಿರ ಕೋಟಿ ಸಹಾಯ ನೀಡಲಿದ್ದು, ಇದರಿಂದ ದೇಶದಲ್ಲಿ ಅಮೂಲ್ಯ ಖನಿಜಗಳ ಪರಿಶೋಧನೆಗೆ ಸಹಾಯವಾಗಲಿದೆ.