Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರಿಂದ ದೇಶದ ಮೊದಲ ಸಹಕಾರಿ ಆಧಾರಿತ 'ಭಾರತ್ ಟ್ಯಾಕ್ಸಿ' ಯೋಜನೆಗೆ ಅಧಿಕೃತ ಚಾಲನೆ.
Authored by:
Heena Sheregar
Date:
5 ಫೆಬ್ರುವರಿ 2026
➤
ನವದೆಹಲಿ:
ಭಾರತದ ಸಹಕಾರಿ ವಲಯದಲ್ಲಿ ಹೊಸ ಕ್ರಾಂತಿ ಆರಂಭವಾಗಿದೆ. ಕೇಂದ್ರ ಸಹಕಾರ ಸಚಿವ
ಅಮಿತ್ ಶಾ
ಅವರು ಫೆಬ್ರವರಿ 5, 2026 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ದೇಶದ ಮೊದಲ ಸಹಕಾರಿ ಆಧಾರಿತ ರೈಡ್-ಹೇಲಿಂಗ್ (ಟ್ಯಾಕ್ಸಿ ಸೇವೆ) ಪ್ಲಾಟ್ಫಾರ್ಮ್
'ಭಾರತ್ ಟ್ಯಾಕ್ಸಿ' (Bharat Taxi)
ಗೆ ಅಧಿಕೃತವಾಗಿ ಚಾಲನೆ ನೀಡಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಸಹಕಾರದಿಂದ ಸಮೃದ್ಧಿ' (Sahkar se Samriddhi) ಎಂಬ ದೂರದೃಷ್ಟಿಯಡಿ ಈ ಯೋಜನೆಯನ್ನು ರೂಪಿಸಲಾಗಿದೆ.
➤
ಭಾರತ್ ಟ್ಯಾಕ್ಸಿ:
ಇದು ಓಲಾ (Ola) ಮತ್ತು ಉಬರ್ (Uber) ನಂತಹ ಖಾಸಗಿ ಕಂಪನಿಗಳಿಗೆ ಪರ್ಯಾಯವಾಗಿ ಸರ್ಕಾರಿ ಬೆಂಬಲಿತ ಸಹಕಾರಿ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದರ ವಿಶೇಷತೆ ಎಂದರೆ ಇಲ್ಲಿ ಚಾಲಕರು ಕೇವಲ ನೌಕರರಲ್ಲ, ಬದಲಿಗೆ ಆ ಸಹಕಾರಿ ಸಂಸ್ಥೆಯ ಮಾಲೀಕರೂ ಆಗಿರುತ್ತಾರೆ.
➤
ಭಾರತ್ ಟ್ಯಾಕ್ಸಿಯ ಪ್ರಮುಖ ಲಕ್ಷಣಗಳು:
-
ಶೂನ್ಯ ಕಮಿಷನ್ ಮಾದರಿ:
ಖಾಸಗಿ ಆಪ್ಗಳಲ್ಲಿ ಚಾಲಕರು ಪ್ರತಿ ಸವಾರಿಗೆ ಭಾರಿ ಕಮಿಷನ್ ನೀಡಬೇಕಾಗುತ್ತದೆ. ಆದರೆ ಭಾರತ್ ಟ್ಯಾಕ್ಸಿಯಲ್ಲಿ ಚಾಲಕರಿಂದ ಯಾವುದೇ ಕಮಿಷನ್ ಪಡೆಯಲಾಗುವುದಿಲ್ಲ.
-
ಗರಿಷ್ಠ ಬೆಲೆ ಏರಿಕೆ ಇಲ್ಲ :
ಮಳೆ ಅಥವಾ ಬೇಡಿಕೆ ಹೆಚ್ಚಾದ ಸಮಯದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುವ 'ಸರ್ಜ್ ಪ್ರೈಸಿಂಗ್' ಪದ್ಧತಿ ಇಲ್ಲಿ ಇರುವುದಿಲ್ಲ.
-
ಸಾರಥಿಯೇ ಮಾಲೀಕ:
'ಸಾರಥಿ ಹಿ ಮಾಲಿಕ್' ತತ್ವದಡಿ ಚಾಲಕರನ್ನು (ಸಾರಥಿಗಳು) ಪ್ಲಾಟ್ಫಾರ್ಮ್ನ ಮಾಲೀಕತ್ವ ಮತ್ತು ಕಾರ್ಯಾಚರಣೆಯ ಕೇಂದ್ರಬಿಂದುವಾಗಿರಿಸಲಾಗಿದೆ.
-
ಬೈಕ್ ದೀದಿ (Bike Didi) ಉಪಕ್ರಮ:
ಮಹಿಳಾ ಸಬಲೀಕರಣಕ್ಕಾಗಿ ಈ ಯೋಜನೆಯಡಿ ಈಗಾಗಲೇ 150ಕ್ಕೂ ಹೆಚ್ಚು ಮಹಿಳಾ ಚಾಲಕರು ಸೇರ್ಪಡೆಗೊಂಡಿದ್ದಾರೆ.
➤ ಸಹಕಾರ ಸಚಿವಾಲಯವು ಚಾಲಕರ ಕಲ್ಯಾಣಕ್ಕಾಗಿ 5 ಲಕ್ಷ ರೂ. ವೈಯಕ್ತಿಕ ಅಪಘಾತ ವಿಮೆ, 5 ಲಕ್ಷ ರೂ. ಕುಟುಂಬ ಆರೋಗ್ಯ ವಿಮೆ ಮತ್ತು ನಿವೃತ್ತಿ ಉಳಿತಾಯ ಯೋಜನೆ ಮತ್ತು ಮೀಸಲಾದ ಚಾಲಕ ಸಹಾಯ ಕೇಂದ್ರಗಳನ್ನು ಘೋಷಿಸಿದೆ.
➤
ಅಂಕಿ-ಅಂಶಗಳು ಮತ್ತು ಪ್ರಗತಿ:
# ನೋಂದಾಯಿತ ಚಾಲಕರುಸುಮಾರು - 4 ಲಕ್ಷ
# ನೋಂದಾಯಿತ ಬಳಕೆದಾರರು - 10 ಲಕ್ಷಕ್ಕೂ ಹೆಚ್ಚು
# ಸ್ಥಾಪನೆ - 6 ಜೂನ್ 2025
# ಕಾಯ್ದೆ - ಮಲ್ಟಿ-ಸ್ಟೇಟ್ ಕೋ-ಆಪರೇಟಿವ್ ಸೊಸೈಟೀಸ್ ಆಕ್ಟ್, 2002
# ಭಾರತ್ ಟ್ಯಾಕ್ಸಿಯನ್ನು ನಿರ್ವಹಿಸುವ ಸಂಸ್ಥೆ: ಸಹಕಾರ್ ಟ್ಯಾಕ್ಸಿ ಕೋ-ಆಪರೇಟಿವ್ ಲಿಮಿಟೆಡ್ (STCL).
Take Quiz
Loading...