Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
₹6,839 ಕೋಟಿ ವೆಚ್ಚದ 'ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ-2' (VVP-II) ಗೆ ಅಮಿತ್ ಶಾ ಚಾಲನೆ
Authored by:
Akshata Halli
Date:
20 ಫೆಬ್ರುವರಿ 2026
➤
ದೇಶದ ಗಡಿ ಭಾಗದ ಭದ್ರತೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. 'ವಿಕಸಿತ ಭಾರತ-2047' ಗುರಿಯತ್ತ ಸಾಗುತ್ತಿರುವ ಭಾರತ ಸರ್ಕಾರ, ಈಗ ಗಡಿ ಗ್ರಾಮಗಳತ್ತ ವಿಶೇಷ ಗಮನ ಹರಿಸಿದೆ. ಶುಕ್ರವಾರದಂದು (20-02-2026) ಕೇಂದ್ರ ಗೃಹ ಸಚಿವ
ಅಮಿತ್ ಶಾ
ಅವರು
'ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ' (VVP) ಎರಡನೇ ಹಂತಕ್ಕೆ
ಅಸ್ಸಾಂನ ಕ್ಯಾಚರ್ ಜಿಲ್ಲೆಯ ನಾಥನ್ಪುರದಲ್ಲಿ ಅದ್ಧೂರಿ ಚಾಲನೆ ನೀಡಿದರು.
➤
ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ (VVP-II):
ಗಡಿ ಭಾಗದ ಗ್ರಾಮಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಅಲ್ಲಿನ ಜನರು ವಲಸೆ ಹೋಗುವುದನ್ನು ತಡೆಯುವುದು ಮತ್ತು ದೇಶದ ಆಂತರಿಕ ಭದ್ರತೆಯನ್ನು ಬಲಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು
1,954 ಗಡಿ ಗ್ರಾಮಗಳನ್ನು
ಈ ಹಂತದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆಗಾಗಿ ಕೇಂದ್ರ ಸರ್ಕಾರ
6,839 ಕೋಟಿ ರೂಪಾಯಿಗಳನ್ನು
ಮೀಸಲಿಟ್ಟಿದೆ.ಈ ಯೋಜನೆಯನ್ನು 2028-29ರ ಹಣಕಾಸು ವರ್ಷದವರೆಗೆ ಅನುಷ್ಠಾನಗೊಳಿಸಲಾಗುವುದು ಮತ್ತು ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ, ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಭಾರತದ ಗಡಿ ಗ್ರಾಮಗಳು ಇದರಲ್ಲಿ ಸೇರಿವೆ.
➤
ಗಡಿ ಭಾಗದ ಗ್ರಾಮಗಳು ಕೇವಲ ವಾಸಸ್ಥಳಗಳಲ್ಲ, ಅವು ದೇಶದ 'ಮೊದಲ ರಕ್ಷಣಾ ಸಾಲು'. ಕೇಂದ್ರ ಗೃಹ ಸಚಿವಾಲಯದ ಪ್ರಕಾರ ಈ ಯೋಜನೆಯಿಂದ ಈ ಕೆಳಗಿನ ಪ್ರಯೋಜನಗಳಿವೆ:
-
ವಲಸೆ ತಡೆಗಟ್ಟುವಿಕೆ:
ಸೌಲಭ್ಯಗಳಿಲ್ಲದೆ ಜನರು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಗಡಿ ಭಾಗದಲ್ಲಿ ಜನಜೀವನ ಸುಗಮಗೊಳಿಸುವುದು.
-
ಅಪರಾಧ ತಡೆ:
ಅಕ್ರಮ ಚಟುವಟಿಕೆಗಳು, ಗಡಿಯಾಚೆಗಿನ ಅಪರಾಧಗಳು ಮತ್ತು ಕಳ್ಳಸಾಗಣೆಯನ್ನು ತಡೆಯಲು ಅಲ್ಲಿನ ನಿವಾಸಿಗಳು ಸರ್ಕಾರದ 'ಕಣ್ಣು ಮತ್ತು ಕಿವಿ'ಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ.
-
ಮೂಲಸೌಕರ್ಯ:
ರಸ್ತೆ, ಕುಡಿಯುವ ನೀರು, ವಿದ್ಯುತ್, ಇಂಟರ್ನೆಟ್ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು.
-
ಪ್ರವಾಸೋದ್ಯಮ ಉತ್ತೇಜನ:
ಗಡಿ ಗ್ರಾಮಗಳಲ್ಲಿ ಪ್ರವಾಸೋದ್ಯಮ ಮತ್ತು ಸ್ಥಳೀಯ ಕಲೆಗಳಿಗೆ ವೇದಿಕೆ ಕಲ್ಪಿಸಿ ಸುಸ್ಥಿರ ಜೀವನೋಪಾಯ ಒದಗಿಸುವುದು.
➤
ಹಂತ-1 ರ ಸಾಧನೆ:
ಈಗಾಗಲೇ ಮುಕ್ತಾಯಗೊಂಡ ಮೊದಲ ಹಂತದಲ್ಲಿ (VVP-I), ಕೇಂದ್ರ ಸರ್ಕಾರವು 3,431 ಕೋಟಿ ರೂ. ವೆಚ್ಚದಲ್ಲಿ 2,558 ಯೋಜನೆಗಳನ್ನು ಮಂಜೂರು ಮಾಡಿತ್ತು. ಇದರಲ್ಲಿ ಆರೋಗ್ಯ ಶಿಬಿರಗಳು, ಪ್ರವಾಸೋದ್ಯಮ ಪ್ರಚಾರ ಮತ್ತು ಜಾಗೃತಿ ಅಭಿಯಾನಗಳು ಸೇರಿದಂತೆ ಸುಮಾರು 8,500 ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
Take Quiz
Loading...