* ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಅಮೆರಿಕ ಹೊರಬರುತ್ತಿದೆ ಎಂದು ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ(ಜನವರಿ 20) ಘೋಷಿಸಿದ್ದಾರೆ.* ಇದರೊಂದಿಗೆ ಡಬ್ಲ್ಯೂಎಚ್ಒ ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಅನಾರೋಗ್ಯ ಸಮಸ್ಯೆಗಳ ನಿರ್ವಹಣೆಯಲ್ಲಿ ಜೊತೆಗಿದ್ದ ನಿರ್ಣಾಯಕ ಪಾಲುದಾರರನ್ನು ಕಳೆದುಕೊಳ್ಳಲಿದೆ.* ಟ್ರಂಪ್ ಅವರು COVID-19 ಸಾಂಕ್ರಾಮಿಕ ಮತ್ತು ಇತರ ಅಂತರರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಡಬ್ಲ್ಯುಎಚ್ಒ ವಿಫಲವಾಗಿದೆ ಎಂದು ಹೇಳಿದರು. ಅವರು ಅಮೆರಿಕವು ಡಬ್ಲ್ಯುಎಚ್ಒನಿಂದ ಅಧಿಕೃತವಾಗಿ ನಿರ್ಗಮಿಸುವುದಾಗಿ ಘೋಷಿಸಿದರು ಮತ್ತು ಡಬ್ಲ್ಯುಎಚ್ಒ ಅಮೆರಿಕನನ್ನು ಬಲಹೀನಗೊಳಿಸಲು ಪ್ರಯತ್ನಿಸಿದೆ ಆದರೆ ಅದು ಇನ್ನು ಮುಂದೆ ನಡೆಯುವುದಿಲ್ಲ ಎಂದು ಆರೋಪಿಸಿದರು.* ಅಮೆರಿಕ ಮುಂದಿನ 12 ತಿಂಗಳಲ್ಲಿ ಡಬ್ಲ್ಯುಎಚ್ಒನಿಂದ ಹೊರಬರಲಿದೆ ಮತ್ತು ಅದಕ್ಕೆ ನೀಡುವ ಹಣಕಾಸಿನ ನೆರವನ್ನು ನಿಲ್ಲಿಸಲಿದೆ.* ಈ ಪ್ರಕ್ರಿಯೆ ಜಾರಿಯಲ್ಲಿರುವಾಗ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಸಂಬಂಧಿ ಮಾತುಕತೆಗಳು ನಿಲ್ಲಿಸಲ್ಪಟ್ಟಿದ್ದು, ಅಮೆರಿಕದ ಸರ್ಕಾರಿ ಸಿಬ್ಬಂದಿಗಳನ್ನು ಡಬ್ಲ್ಯುಎಚ್ಒನಿಂದ ವಾಪಸ್ ಕರೆಸಿಕೊಳ್ಳಲಾಗುವುದು ಮತ್ತು ಪಾಲುದಾರರನ್ನು ಮರು ನೇಮಕ ಮಾಡಲಾಗುವುದು.* ಡಬ್ಲ್ಯುಎಚ್ಒ ದಿಂದ ಟ್ರಂಪ್ ಅವರ ಆದೇಶಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕವು ಡಬ್ಲ್ಯುಎಚ್ಒನ ಅತಿದೊಡ್ಡ ಆರ್ಥಿಕ ಬೆಂಬಲವಾಗಿದ್ದು, ಅದರ ಒಟ್ಟು ನಿಧಿಯ ಶೇ 18ರಷ್ಟು ಕೊಡುಗೆಯನ್ನು ನೀಡುತ್ತಿತ್ತು.* ಅಮೆರಿಕದ ಈ ನಿರ್ಧಾರವು ಕ್ಷಯ, ಎಚ್ಐವಿ ಅಥವಾ ಏಡ್ಸ್ ಸೇರಿ ಇತರ ಆರೋಗ್ಯ ತುರ್ತುಸ್ಥಿತಿಗಳನ್ನು ನಿರ್ವಹಿಸುವಲ್ಲಿ ಡಬ್ಲ್ಯುಎಚ್ಒ ತೊಂದರೆ ಅನುಭವಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.