* ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಧ್ರುವಿ ಪಟೇಲ್ ಅವರು ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024ರ (Miss India Worldwide 2024) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚೆಗೆ ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರನ್ನು ಘೋಷಿಸಲಾಯಿತು.* ಧ್ರುವಿ ಮಿಸ್‌ ಇಂಡಿಯಾ ವರ್ಲ್ಡ್‌ವೈಡ್‌ , ಲಿಸಾ ಅಬ್ಡೋಲ್ಹಾಕ್ ಅವರು ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 ರನ್ನರ್ ಅಪ್ ಆದರು. ಮಾಳವಿಕಾ ಶರ್ಮಾ ಅವರು ಸೆಕೆಂಡ್ ರನ್ನರ್ ಅಪ್ ಆಗಿ ಗೆಲುವು ಸಾಧಿಸಿದರು.* ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಇಂಡಿಯನ್ ಫೆಸ್ಟಿವಲ್ ಕಮಿಟಿ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಸ್ಪರ್ಧೆ ಆಯೋಜಿಸುತ್ತದೆ. 31ನೇ ವರ್ಷಾಚರಣೆ ಆಚರಿಸುತ್ತಿರುವ ಈ ಕಮಿಟಿ ಹೊರದೇಶಗಳಲ್ಲಿರುವ ಭಾರತೀಯ ಪ್ರತಿಭೆಗಳನ್ನು ಗುರುತಿಸುತ್ತದೆ.* ಗುಜರಾತ್ ಮೂಲದ ಧ್ರುವಿ ಪಟೇಲ್ ಅವರು ಅಮೆರಿಕದಲ್ಲಿ ಕಂಪ್ಯೂಟರ್ ಇನ್ಫರ್ಮೆಷನ್ ಸಿಸ್ಟಮ್ ಪದವಿ ಓದುತ್ತಿದ್ದಾರೆ.* ಮಿಸ್‌ ಇಂಡಿಯಾ ವರ್ಲ್ಡ್‌ವೈಡ್ ವಿಜೇತೆಯಾಗಿರುವುದು ತುಂಬಾ ದೊಡ್ಡ ಗೌರವವಾಗಿ ನಾನು ಪರಿಗಣಿಸುತ್ತೇನೆ, ಕಿರೀಟಕ್ಕಿಂತ ಇದು ನನ್ನ ಪರಂಪರೆ, ಮೌಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಲುಸಾಧ್ಯವಾಗುವುದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಧ್ರುವಿ ಪಟೇಲ್ ಸಂತಸ ವ್ಯಕ್ತಪಡಿಸಿದ್ದಾರೆ.* 2023ರಲ್ಲಿ ಈ ಸುಂದರಿ ಮಿಸ್‌ ಇಂಡಿಯಾ ನ್ಯೂ ಇಂಗ್ಲೆಂಡ್ ಕಿರೀಟ ಗೆದ್ದಿದ್ದರು. ಚಾರಿಟಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಈ ಸುಂದರಿ 3DCharities ನಡೆಸುತ್ತಿದ್ದು ಇದು ಲಾಭರಹಿತ ಚಾರಿಟಿಯಾಗಿದ್ದು ಈ ಮೂಲಕ ಅಗ್ಯತವಿರುವವರಿಗೆ ನೆರವು ನೀಡುತ್ತಿದ್ದಾರೆ.