* 19 ವರ್ಷದ ಒಳಗೆ ಲಿಂಗ ಪರಿವರ್ತಿಸಿಕೊಳ್ಳುವುದನ್ನು ನಿಷೇಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ್ದಾರೆ. ಈ ಹೊಸ ಘೋಷಣೆಗಳ ಪಟ್ಟಿಗೆ ಲಿಂಗ ಪರಿವರ್ತನೆ ಮೇಲಿನ ನಿಷೇಧ ನೀತಿಯು ಹೊಸ ಸೇರ್ಪಡೆಯಾಗಿದೆ.* ‘ಒಂದು ಲಿಂಗದಿಂದ ಇನ್ನೊಂದು ಲಿಂಗಕ್ಕೆ ಪರಿವರ್ತನೆ ಆಗುವುದಕ್ಕೆ ಅಮೆರಿಕವು ಯಾವುದೇ ಅನುದಾನ ನೀಡುವುದಿಲ್ಲ. ಇಂಥ ಚಿಕಿತ್ಸೆಯ ಬಗ್ಗೆ ಪ್ರಚಾರವನ್ನಾಗಲಿ, ಸಹಕಾರವನ್ನಾಗಲಿ ಅಮೆರಿಕ ನೀಡುವುದಿಲ್ಲ. ಲಿಂಗಪರಿವರ್ತನೆಯನ್ನು ನಿಷೇಧಿಸುವ ಎಲ್ಲ ರೀತಿಯ ಕಾನೂನು ನಿಯಮಗಳನ್ನು ಅಮೆರಿಕ ಜಾರಿ ಮಾಡಲಿದೆ’ ಎಂದು ಟ್ರಂಪ್ ಅವರು ಹೇಳಿದ್ದಾರೆ.* ಮಕ್ಕಳ ಲಿಂಗ ಬದಲಾವಣೆಗೆ ಅಮೆರಿಕ ಸರಕಾರವು ಹಣಕಾಸು ಒದಗಿಸುವುದಿಲ್ಲ, ಪ್ರಾಯೋಜಿಸುವುದಿಲ್ಲ,ಪ್ರಚಾರ ಮಾಡುವುದಿಲ್ಲ ಮತ್ತು ಬೆಂಬಲ ನೀಡುವುದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. ಪ್ರೌಢಾವಸ್ಥೆಗೆ ತಡೆಗಳು, ಹಾರ್ಮೋನ್ ಚಿಕಿತ್ಸೆಗಳು ಮತ್ತು ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗಳನ್ನು ನಿರ್ಬಂಧಿಸಲಾಗಿದೆ.* ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ವೈದ್ಯರ ವಿರುದ್ಧ ಮೊಕದ್ದಮೆಗಳನ್ನು ಹೂಡಲು ಮಕ್ಕಳು ಮತ್ತು ಪೋಷಕರಿಗೆ ಅವಕಾಶವನ್ನು ನೀಡುವ ಶಾಸನದ ಕುರಿತು ತಾನು ಕಾಂಗ್ರೆಸ್ ಜೊತೆ ಚರ್ಚಿಸುವುದಾಗಿಯೂ ಟ್ರಂಪ್ ಅವರು ತಿಳಿಸಿದ್ದಾರೆ.* ರಿಪಬ್ಲಿಕನ್ ಪಕ್ಷದ ಆಡಳಿತವಿರುವ ಸಮಾರು 24 ರಾಜ್ಯಗಳು ಈಗಾಗಲೇ ಅಪ್ರಾಪ್ತ ವಯಸ್ಕರಿಗೆ ಲಿಂಗ ಪರಿವರ್ತನೆಗಾಗಿ ವೈದ್ಯಕೀಯ ಆರೈಕೆಯನ್ನು ನಿರ್ಬಂಧಿಸುವ ಕಾನೂನುಗಳನ್ನು ಅಂಗೀಕರಿಸಿವೆ.