* ಅಮೆರಿಕದ ಉಪಾಧ್ಯಕ್ಷ ಜೆ. ಡಿ. ವ್ಯಾನ್ಸ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ.* ಈ ಇಬ್ಬರೂ ಪ್ರತ್ಯೇಕವಾಗಿ ಭಾರತಕ್ಕೆ ಏಪ್ರಿಲ್ 21 ರಿಂದ 25ರ ನಡುವೆ ಆಗಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.* ಟ್ರಂಪ್ ಆಡಳಿತಕ್ಕೆ ಅಧಿಕಾರ ಸ್ವೀಕಾರವಾದ ಬಳಿಕ ಜೆ. ಡಿ. ವ್ಯಾನ್ಸ್ ಮೊದಲಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ವಿಶ್ವಮಟ್ಟದಲ್ಲಿ ಡೊನಾಲ್ಡ್ ಟ್ರಂಪ್ ತೆರಿಗೆ ಯುದ್ಧ ಆರಂಭಿಸಿದ ಸಮಯದಲ್ಲಿ ವಾನ್ಸ್ ಅವರ ಭಾರತ ಪ್ರವಾಸ ಮಹತ್ವ ಹೊಂದಿದೆ.* ಮತ್ತೊಂದೆಡೆ, ಮೈಕ್ ವಾಲ್ಟ್ಜ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಮಾತುಕತೆ ನಡೆಸಲಿದ್ದಾರೆ. ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ತಹವ್ವೂರ್ ರಾಣಾವನ್ನು ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸಿದ ಬೆನ್ನಲ್ಲೇ ಇರುವುದು ಈ ಸಭೆಗೆ ವಿಶೇಷ ಮಹತ್ವ ನೀಡುತ್ತದೆ.