* ಎಸ್ ಆ್ಯಂಡ್ ಪಿ ಜಾಗತಿಕ ರೇಟಿಂಗ್ಸ್ ಸಂಸ್ಥೆ ತಿಳಿಸಿದಂತೆ, ಅಮೆರಿಕ ವಿಧಿಸಿರುವ ಹೆಚ್ಚುವರಿ ಸುಂಕಗಳು ಭಾರತದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿನ ಮಟ್ಟದಲ್ಲಿ ಪ್ರಭಾವಿಸುವುದಿಲ್ಲ. * ಭಾರತದ ಆರ್ಥಿಕತೆ ಬಾಹ್ಯ ವ್ಯಾಪಾರವನ್ನು ಹೆಚ್ಚಾಗಿ ಅವಲಂಬಿಸದ ಕಾರಣ, ದೇಶದ ರೇಟಿಂಗ್ ಮುನ್ನೋಟ ಧನಾತ್ಮಕವಾಗಿಯೇ ಮುಂದುವರಿಯಲಿದೆ.* ಕಳೆದ ಮೇ ತಿಂಗಳಲ್ಲಿ, ಭಾರತದ ಆರ್ಥಿಕ ಬೆಳವಣಿಗೆಯನ್ನು ಗಮನಿಸಿ ಎಸ್ ಅಂಡ್ ಪಿ ತನ್ನ ರೇಟಿಂಗ್ ಮುನ್ನೋಟವನ್ನು ‘ಬಿಬಿಬಿ–’ ನಿಂದ ‘ಧನಾತ್ಮಕ’ಕ್ಕೆ ಪರಿಷ್ಕರಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ 6.5ರಷ್ಟು ಇರಲಿದೆ ಎಂದು ಸಂಸ್ಥೆ ಅಂದಾಜು ಮಾಡಿದೆ.* ಅಮೆರಿಕವು ಔಷಧ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಹೆಚ್ಚುವರಿ ಸುಂಕದಿಂದ ಹೊರಗಿಟ್ಟಿದೆ.* ಉದ್ದಿಮೆಗಳು ಭಾರತದಲ್ಲಿ ತಯಾರಿಕಾ ಘಟಕಗಳನ್ನು ಕೇವಲ ರಫ್ತು ಉದ್ದೇಶಕ್ಕಲ್ಲದೆ, ದೇಶೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೂ ಆರಂಭಿಸುತ್ತಿವೆ. ಭಾರತದ ಮಧ್ಯಮ ವರ್ಗದ ವೃದ್ಧಿ ಹೂಡಿಕೆದಾರರಿಗೆ ಆಕರ್ಷಕ ಅವಕಾಶ ಒದಗಿಸುತ್ತಿದೆ.