* ಅಮೆರಿಕ ಯುನೆಸ್ಕೊದಿಂದ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ಮರುಬಾರಿಗೆ ಹೊರಬರುವ ನಿರ್ಧಾರ ತೆಗೆದುಕೊಂಡಿದೆ.* ಈ ನಿರ್ಧಾರಕ್ಕೆ ಕಾರಣವಾಗಿ ಯುನೆಸ್ಕೊ ಇಸ್ರೇಲಿ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂಬ ಆರೋಪವನ್ನು ಅಮೆರಿಕ ಮುಂದಿಟ್ಟಿದೆ.* ಈ ಹಿಂದೆ ಕೂಡಾ ಅಮೆರಿಕ ಯುನೆಸ್ಕೊದಿಂದ ಹೊರಬಂದಿತ್ತು. ನಂತರ, ಐದು ವರ್ಷಗಳ ನಂತರ ಜೋ ಬೈಡನ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಮೆರಿಕ ಮತ್ತೆ ಸಂಸ್ಥೆಯಲ್ಲಿ ಸೇರ್ಪಡೆಯಾಗಿತ್ತು. ಆದರೆ ಈಗ, ಟ್ರಂಪ್ ಅವರ ಆಡಳಿತದಲ್ಲಿ ಮರುಬಾರಿಗೆ ಹೊರಬರುವ ನಿರ್ಧಾರ ತೆಗೆದುಕೊಳ್ಳಲಾಗಿದೆ.* ಶ್ವೇತಭವನದ ಉಪ ವಕ್ತಾರೆ ಅನ್ನಾ ಕೆಲ್ಲಿ ಈ ನಿರ್ಧಾರವನ್ನು ದೃಢಪಡಿಸಿದ್ದು, ಇದು ಯುನೆಸ್ಕೋದಿಂದ ಅಮೆರಿಕ ಹೊರಬರುವ ಮೂರನೇ ಸಂದರ್ಭವಾಗಿದೆ. ಈ ಹೊಸ ನಿರ್ಧಾರವು 2026ರ ಡಿಸೆಂಬರ್ನ ಅಂತ್ಯಕ್ಕೆ ಜಾರಿಗೆ ಬರಲಿದೆ.