* ಅಮೆರಿಕದ ವಸ್ತುಗಳಿಗೆ ವಿಧಿಸಲಾಗಿದ್ದ ಸುಂಕವನ್ನು ಶೇಕಡಾ 100ರಷ್ಟು ಕಡಿತಗೊಳಿಸಲು ಭಾರತ ಸರ್ಕಾರ ಒಪ್ಪಿಕೊಂಡಿದೆ.* ಈ ಕುರಿತು ಶೀಘ್ರದಲ್ಲೇ ವಾಷಿಂಗ್ಟನ್ ಮತ್ತು ನವದೆಹಲಿಗೆ ನಡುವೆ ವ್ಯಾಪಾರ ಒಪ್ಪಂದ ನಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.* ಭಾರತವು ಜಗತ್ತಿನ ಅತ್ಯಧಿಕ ಸುಂಕ ವಿಧಿಸುವ ರಾಷ್ಟ್ರವಾಗಿದೆ. ಈ ಒಪ್ಪಂದದ ಕುರಿತಾಗಿ ನನಗೆ ತುರ್ತು ಇಲ್ಲ, ದಕ್ಷಿಣ ಕೊರಿಯಾ ಜೊತೆ ಒಪ್ಪಂದ ನಡೆದಿದೆ. ಆದರೆ ನಾನು ಪ್ರತಿಯೊಬ್ಬರ ಜೊತೆಗೆ ಒಪ್ಪಂದಕ್ಕೆ ಮುಂದಾಗುವುದಿಲ್ಲ. ನಮಗೆ 150ಕ್ಕೂ ಹೆಚ್ಚು ರಾಷ್ಟ್ರಗಳಿವೆ, ಎಲ್ಲರೊಂದಿಗೆ ಭೇಟಿಯಾಗಲು ಸಾಧ್ಯವಿಲ್ಲ.* ನಾನು ಒಂದು ಗಡಿಗೆ ಬಂದಾಗ ಕೆಲವು ರಾಷ್ಟ್ರಗಳೊಂದಿಗೆ ಮಾತ್ರ ಒಪ್ಪಂದ ಮಾಡಿಕೊಳ್ಳುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.* ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, 'ಯಾವುದೇ ವ್ಯಾಪಾರ ಒಪ್ಪಂದಗಳು ಪರಸ್ಪರ ಲಾಭದಾಯಕವಾಗಬೇಕೆಂಬುದು ಮುಖ್ಯ' ಎಂದು ಹೇಳಿದ್ದಾರೆ.* ವ್ಯಾಪಾರ ಒಪ್ಪಂದದ ಪ್ರಸ್ತಾವನೆಯ ಕುರಿತು ಚರ್ಚೆಗಾಗಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಈಗ ವಾಷಿಂಗ್ಟನ್ನಲ್ಲಿ ಇದ್ದಾರೆ.