* ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಪತ್ನಿ ಉಷಾ ವ್ಯಾನ್ಸ್, ಮಕ್ಕಳೊಂದಿಗೆ ಹಾಗೂ ಉನ್ನತ ಮಟ್ಟದ ಅಮೆರಿಕದ ಪ್ರತಿನಿಧಿಗಳ ಸಹಿತ ಭಾರತಕ್ಕೆ ಆಗಮಿಸಿದ್ದಾರೆ.* ಈ ವೇಳೆ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಪಾಲಂ ವಾಯುನೆಲೆಯಲ್ಲಿ ಆತಿಥ್ಯ ಸ್ವೀಕರಿಸಿದರು.* ವ್ಯಾನ್ಸ್ ಅವರಿಗೆ ನವದೆಹಲಿ ಸೇನಾ ವಿದಾನಗಳಲ್ಲಿ ಮೂರೂ ರಕ್ಷಣಾ ಪಡೆಗಳಿಂದ ಗೌರವ ವಂದನೆ ಸಲ್ಲಿಸಲಾಯಿತು.* ಈ ಭೇಟಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ನಡೆಸಲಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಸಲಾಗುತ್ತದೆ. ಜೊತೆಗೆ, ಅಗ್ರಾ ಮತ್ತು ಜೈಪುರ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡುವ ಕಾರ್ಯಕ್ರಮವೂ ಇದೆ.* ಭಾರತ-ಅಮೆರಿಕ ನಡುವಿನ ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಹಾಕುವ ನಿರೀಕ್ಷೆಯಿರುವ ಈ ಭೇಟಿಯು, ರಕ್ಷಣೆ, ಸುಂಕ, ವ್ಯಾಪಾರ ಸೇರಿದಂತೆ ಹಲವಾರು ಅಂಶಗಳ ಬಗ್ಗೆ ಮಾತುಕತೆಗೆ ವೇದಿಕೆಯಾಗಲಿದೆ.* ಈ ಭೇಟಿಯು ಕಳೆದ 13 ವರ್ಷಗಳಲ್ಲಿ ಭಾರತಕ್ಕೆ ಆಗಮಿಸುತ್ತಿರುವ ಮೊದಲ ಅಮೆರಿಕ ಉಪಾಧ್ಯಕ್ಷರ ಭೇಟಿ ಎಂಬುದರಿಂದ ವಿಶೇಷ ಮಹತ್ವ ಹೊಂದಿದೆ.* ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಹ ಭಾಗವಹಿಸಲಿದ್ದಾರೆ.* ಏಪ್ರಿಲ್ 22 ರಂದು ವ್ಯಾನ್ಸ್ ಜೈಪುರದ ಐತಿಹಾಸಿಕ ಸ್ಥಳಗಳನ್ನು ಭೇಟಿ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯ ಪಾರಂಪರಿಕ ವೈಭವವನ್ನು ಅನುಭವಿಸಲಿದ್ದಾರೆ.