* ಭಾರತವು ಅಮೆರಿಕ ವಿಧಿಸಿರುವ ಶೇ. 26ರಷ್ಟು ಹೆಚ್ಚುವರಿ ಪ್ರತಿ ಸುಂಕದಿಂದ ಸಂಪೂರ್ಣ ವಿನಾಯಿತಿ ಪಡೆಯಲು ಪ್ರಯತ್ನಿಸುತ್ತಿದೆ.* ಈ ಸಂಬಂಧ ಜುಲೈ 8ರೊಳಗೆ ಮಧ್ಯಂತರ ವ್ಯಾಪಾರ ಒಪ್ಪಂದ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.* ಏಪ್ರಿಲ್ 2ರಂದು ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲೆ ಶೇ. 26ರಷ್ಟು ಹೆಚ್ಚುವರಿ ಸುಂಕ ವಿಧಿಸಿತು. ನಂತರ 90 ದಿನಗಳ ಕಾಲ ಈ ಸುಂಕ ಜಾರಿಗೆ ವಿರಾಮ ನೀಡಿದ್ದು, ಜುಲೈ 9ರವರೆಗೆ ಮುಂದುವರಿಯಲಿದೆ. ಆದರೂ ಟ್ರಂಪ್ ವಿಧಿಸಿರುವ ಶೇ. 10ರಷ್ಟು ಮೂಲ ಸುಂಕದಲ್ಲಿ ಬದಲಾವಣೆ ಇಲ್ಲ.* ಭಾರತದಿಂದ ರಫ್ತು ಆಗುವ ಕೃಷಿ ಮತ್ತು ಹೈನು ಉತ್ಪನ್ನಗಳಿಗೆ ಸುಂಕ ವಿನಾಯಿತಿಗಾಗಿ ಭಾರತ ಒತ್ತಡ ಹೇರುತ್ತಿದೆ. ಅಮೆರಿಕದಿಂದ ಇಂತಹ ಉತ್ಪನ್ನಗಳನ್ನು ಆಮದು ಮಾಡುವಾಗ ಕೋಟಾ ಅಥವಾ ಕನಿಷ್ಠ ದರ ನಿಗದಿಪಡಿಸುವ ಸಾಧ್ಯತೆ ಇದೆ.* ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಮೆರಿಕದ ವ್ಯಾಪಾರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಜವಳಿ, ಚರ್ಮ, ಪ್ಲಾಸ್ಟಿಕ್, ದ್ರಾಕ್ಷಿ, ಎಣ್ಣೆಕಾಳು ಸೇರಿದಂತೆ ಹಲವು ಉತ್ಪನ್ನಗಳಿಗೆ ಸುಂಕ ವಿನಾಯಿತಿ ಪಡೆಯಲು ಭಾರತ ತೀವ್ರ ಪ್ರಯತ್ನ ಮಾಡುತ್ತಿದೆ.* ಅಮೆರಿಕದ ಆಟೋಮೊಬೈಲ್, ಸೇಬು, ವೈನ್ ಮುಂತಾದ ತಯಾರಿತ ಉತ್ಪನ್ನಗಳ ಮೇಲೆ ಭಾರತವೂ ಸುಂಕ ವಿನಾಯಿತಿ ಕೇಳುವ ಸಾಧ್ಯತೆ ಇದೆ. ಜೊತೆಗೆ ಭಾರತ-ಐರೋಪ್ಯ ಒಕ್ಕೂಟದ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳು ಕೂಡ ಶೀಘ್ರ ಮುಕ್ತಾಯವಾಗುವ ನಿರೀಕ್ಷೆಯಿದೆ.* ಈ ಮಧ್ಯಂತರ ಒಪ್ಪಂದವು ಬೌದ್ಧಿಕ ಆಸ್ತಿ ಹಕ್ಕುಗಳು, ಸರಕಾರದ ಸಬ್ಸಿಡಿಗಳು, ಸುಂಕ ಮತ್ತು ಇತರ ಅಡೆತಡೆಗಳನ್ನು ಪರಿಹರಿಸುವ ಉದ್ದೇಶವಿದೆ.