* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್–ರಷ್ಯಾ ಯುದ್ಧ ಅಂತ್ಯಗೊಳಿಸುವ ಕುರಿತಾಗಿ ದೀರ್ಘ ಮಾತುಕತೆ ನಡೆಸಿದರೂ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ಟ್ರಂಪ್ ಅವರ ಪ್ರಕಾರ, ಒಮ್ಮತವಿಲ್ಲದೆ ಒಪ್ಪಂದ ಸಾಧ್ಯವಿಲ್ಲ.* ಪುಟಿನ್ ಅವರು “ಉಕ್ರೇನ್ ವಿಚಾರದಲ್ಲಿ ಕೆಲವು ಅಂಶಗಳಲ್ಲಿ ಸಹಮತವಿದೆ, ಆದರೆ ಇದನ್ನು ಐರೋಪ್ಯ ರಾಷ್ಟ್ರಗಳು ಹಾಳು ಮಾಡಬಾರದು” ಎಂದು ಅಭಿಪ್ರಾಯಪಟ್ಟರು.* ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಹಾಗೂ ಐರೋಪ್ಯ ನಾಯಕರನ್ನು ಮಾತುಕತೆಯ ವಿವರ ಹಂಚಿಕೊಳ್ಳಲು ಆಹ್ವಾನಿಸಲು ನಿರ್ಧರಿಸಿದ್ದಾರೆ. ಝೆಲೆನ್ಸ್ಕಿ ಅವರು ಟ್ರಂಪ್ ಆಹ್ವಾನವನ್ನು ಸ್ವೀಕರಿಸಿದ್ದಾರೆ.* ಮಾತುಕತೆ ನಂತರ ಜಂಟಿ ಪತ್ರಿಕಾಗೋಷ್ಠಿ ನಡೆದರೂ ಟ್ರಂಪ್ ಮತ್ತು ಪುಟಿನ್ ಅವರು ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.* ಬಳಿಕ ಟ್ರಂಪ್ ಅವರು “ಮುಂದಿನ ಜವಾಬ್ದಾರಿ ಝೆಲೆನ್ಸ್ಕಿಯವರದ್ದು, ಆದರೆ ಐರೋಪ್ಯ ರಾಷ್ಟ್ರಗಳ ಪಾಲ್ಗೊಳ್ಳುವಿಕೆ ಖಚಿತ” ಎಂದು ಹೇಳಿದ್ದಾರೆ.