* ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಮುಗಿಸಿದ್ದು, ಅಧ್ಯಕ್ಷ ಟ್ರಂಪ್ ಜೊತೆಗೆ ತಂತ್ರಜ್ಞಾನ, ಭದ್ರತೆ, ಇಂಧನ, ರಕ್ಷಣೆ ಸೇರಿದಂತೆ ಹಲವು ವಿಚಾರಗಳ ಮೇಲೆ ಮಾತುಕತೆ ನಡೆಸಿದರು.* ಬುಧವಾರ (ಫೆ.12) ಫ್ರಾನ್ಸ್ನಿಂದ ಅಮೆರಿಕಕ್ಕೆ ಆಗಮಿಸಿದ ಮೋದಿ, ಫೆ.13 ಟ್ರಂಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಎರಡನೇ ಅವಧಿಗೆ ಟ್ರಂಪ್ ಅಧಿಕಾರ ವಹಿಸಿಕೊಂಡ ಬಳಿಕ ಉಭಯ ನಾಯಕರ ಮೊದಲ ಭೇಟಿ ಆಗಿತ್ತು.* ಮೋದಿ-ಟ್ರಂಪ್ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚಿಸಿದರು. ಮೋದಿ ಭೇಟಿ ಕುರಿತು, ಇದು ಭಾರತ- ಅಮೆರಿಕ ಸ್ನೇಹವನ್ನು ಗಟ್ಟಿಗೊಳಿಸುತ್ತದೆ ಎಂದಿದ್ದಾರೆ.* ‘ಟ್ರಂಪ್ ಅವರು ಮತ್ತೆ ಅಮೆರಿಕವನ್ನು ಶ್ರೇಷ್ಠವಾಗಿಸುವ ಬಗ್ಗೆ ಮಾತನಾಡುತ್ತಾರೆ. ನಾವು ವಿಕಸಿತ ಭಾರತಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಉಭಯ ರಾಷ್ಟ್ರಗಳು ಅಭಿವೃದ್ಧಿಗಾಗಿ ದೊಡ್ಡ ಪಾಲುದಾರಿಕೆ ಹೊಂದಿವೆ’ ಎಂದು ಮೋದಿ ಹೇಳಿದ್ದಾರೆ.* ಭಾರತದೊಂದಿಗೆ ವ್ಯಾಪಾರ ಅಭಿವೃದ್ಧಿ, ರಕ್ಷಣಾ ಪಾಲುದಾರಿಕೆಯ ಬಗ್ಗೆಯೂ ಟ್ರಂಪ್ ಘೋಷಣೆ ಮಾಡಿದರು. ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರನ್ನೂ ಪ್ರಧಾನಿ ಭೇಟಿ ಮಾಡಿದರು.* ‘ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಅಮೆರಿಕಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಫಲಪ್ರದವಾಗಿತ್ತು’ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.* ಎರಡು ದಿನಗಳ ಪ್ರವಾಸದ ವೇಳೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ವಾಲ್ಟ್ಸ್ ಹಾಗೂ ರಾಷ್ಟ್ರೀಯ ಗುಪ್ತದಳದ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರನ್ನು ಮೋದಿ ಭೇಟಿ ಮಾಡಿದರು.