* ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ನಿರಂತರ ಚರ್ಚೆ ನಡೆಸುತ್ತಿವೆ.* ಈ ವರ್ಷದ ಅಂತ್ಯದ ವೇಳೆಗೆ ಮಾತುಕತೆಯ ಪ್ರಥಮ ಹಂತದ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ ಎಂದು ವಾಣಿಜ್ಯ, ಕೈಗಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ಜಿತಿನ್ ಪ್ರಸಾದ್ ತಿಳಿಸಿದ್ದಾರೆ.* ನ್ಯೂಯಾರ್ಕ್ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ಸದಸ್ಯರಿಗೆ ಅವರು ಉದ್ದೇಶಿಸಿ ಮಾತನಾಡಿದರು.* "ಭಾರತ-ಅಮೆರಿಕ ಸಂಬಂಧಗಳು ಶಕ್ತಿಶಾಲಿಯಾಗಿವೆ. ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಜೊತೆ ಸಂವಾದ ನಡೆಸಿದ್ದಾರೆ.* ಸೆಪ್ಟೆಂಬರ್ ವೇಳೆಗೆ ನಮ್ಮ ಕಾರ್ಯಕ್ರಮಗಳು ಮತ್ತು ನೀತಿಗಳ ಆರಂಭಿಕ ಹಂತಗಳು ನಿಮಗೆ ಗೋಚರವಾಗುತ್ತವೆ. * ಭಾರತೀಯ ವಲಸಿಗರು ಭಾರತ ಮತ್ತು ಅಮೆರಿಕ ನಡುವಿನ ಜೀವಂತ ಸೇತುವೆಯಂತಿದ್ದಾರೆ. ಅವರು ಎರಡೂ ದೇಶಗಳ ನಡುವಿನ ಸಂಪರ್ಕ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಅವರು ಹೇಳಿದರು.