* ಅಮೆರಿಕದ ರಾಷ್ಟೀಯ ಆರೋಗ್ಯ ಸಂಸ್ಥೆ(ನ್ಯಾಷನಲ್ ಇನ್ಸ್ಟಿಟ್ಯೂಟ್ಸ್ ಆಫ್ ಹೆಲ್ತ್ನ (NIH)) ನ ನೂತನ ಮುಖ್ಯಸ್ಥರಾಗಿ ಭಾರತ ಮೂಲದ ಜಯ್ ಭಟ್ಟಾಚಾರ್ಯ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇಮಕಮಾಡಿದ್ದಾರೆ. * NIH ಅಮರಿಕದ ಆರೋಗ್ಯ ಇಲಾಖೆ ಅಡಿ ಕಾರ್ಯನಿರ್ವಹಿಸುವ ಅತ್ಯುನ್ನತ ಸಂಸ್ಥೆಯಾಗಿದೆ. ಇದು 27 ಕ್ಕೂ ಹೆಚ್ಚು ಸಂಸ್ಥೆಗಳಿಗೆ ಆರೋಗ್ಯ ಕಾರ್ಯಚಟುವಟಿಕೆಗೆ ಹಾಗೂ ಸಂಶೋಧನೆಗೆ ನಿಧಿ ಬಿಡುಗಡೆ ಮಾಡುತ್ತದೆ.* ಜಯ್ ಭಟ್ಟಾಚಾರ್ಯ ಅವರು ಕೋಲ್ಕತ್ತ ಮೂಲದವರಾಗಿದ್ದು ವೈದ್ಯಕೀಯ ಪದವಿ ಜೊತೆಗೆ ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿ ಪಡೆದಿದ್ದಾರೆ. ಅನೇಕ ವರ್ಷ ಅಮೆರಿಕದ ಆರೋಗ್ಯ ಇಲಾಖೆ ಜೊತೆ ಕೆಲಸ ಮಾಡಿದ ಅನುಭವ ಅವರಿಗಿದೆ.* ಡೊನಾಲ್ಡ್ ಟ್ರಂಪ್ ಅವರ ಆಪ್ತ ಬಳಗದಲ್ಲಿ ಜೈ ಭಟ್ಟಾಚಾರ್ಯ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರ ಕೋವಿಡ್ ಸಂಬಂಧಿತ ನೀತಿಗಳನ್ನು ಜೈ ಭಟ್ಟಾಚಾರ್ಯ ಟೀಕಿಸಿ ಗಮನ ಸೆಳೆದಿದ್ದರು.