* ಕಾರ್ಲೋಸ್ ಅಲ್ಕರಾಜ್ ಅವರು ಅತ್ಯಂತ ರೋಚಕ ಹೋರಾಟದ ಬಳಿಕ ಯಾನಿಕ್ ಸಿನ್ನರ್ ಅವರನ್ನು 4-6, 6-7, 6-4, 7-6, 7-6 ಸೆಟ್ಗಳಿಂದ ಸೋಲಿಸಿ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು.* ಇದು 5 ಗಂಟೆ 29 ನಿಮಿಷ ನಡೆಯುವ ಮೂಲಕ ಟೂರ್ನಿಯ ಓಪನ್ ಯುಗದ ಫೈನಲ್ ಆಗಿದೆ.* ಮೊದಲ ಫ್ರೆಂಚ್ ಓಪನ್ ಫೈನಲ್ಗೇರಿದ್ದ ಇಟಲಿಯ ಯಾನಿಕ್ ಸಿನ್ನರ್, ಮೊದಲ ಎರಡು ಸೆಟ್ಗಳು ಗೆದ್ದರೂ ಸೋಲನುಭವಿಸಿದರು. ಅವರು ಗ್ರ್ಯಾನ್ ಸ್ಲಾಮ್ ಫೈನಲ್ನಲ್ಲಿ ಇದೇ ಮೊದಲ ಬಾರಿಗೆ ಸೋಲಿದರು.* ಈ ಗೆಲುವು ಅಲ್ಕರಾಜ್ ಅವರ ಐದನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ. 2024ರ ರೋಲ್ಯಾಂಡ್ ಗ್ಯಾರೋಸ್ ಟೂರ್ನಿಯಲ್ಲೂ ಅವರು ಚಾಂಪಿಯನ್ ಆಗಿದ್ದರು.* ಇಟಲಿಯ ಸಾರಾ ಎರಾನಿ ಮತ್ತು ಜಾಸ್ಮಿನ್ ಪಾವೊಲಿನಿ ಮಹಿಳಾ ಡಬಲ್ಸ್ ಪ್ರಶಸ್ತಿ ಜಯಿಸಿದರು. ಫೈನಲ್ನಲ್ಲಿ ಅವರು 6–4, 2–6, 6–1 ಅಂಕಗಳಿಂದ ಗೆಲುವು ಸಾಧಿಸಿದರು.* ಎರಾನಿಗೆ ಇದು ಎರಡನೇ ಫ್ರೆಂಚ್ ಓಪನ್ ಕಿರೀಟವಾಗಿದ್ದು, ಒಟ್ಟು ಆರು ಗ್ರ್ಯಾನ್ಸ್ಲಾಮ್ಗಳು ಅವರ ಖಾತೆಯಲ್ಲಿ ಸೇರ್ಪಡೆಯಾಗಿವೆ.* ಆಸ್ಟ್ರಿಯಾದ 17 ವರ್ಷದ ಲಿಲ್ಲಿ ಟ್ಯಾಗರ್ ಜೂನಿಯರ್ ಬಾಲಕಿಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅವರು ಬ್ರಿಟನ್ನ ಹೆನಾ ಕ್ಲುಗ್ಮ್ಯಾನ್ ಅವರನ್ನು 6–2, 6–0 ಅಂಕಗಳಿಂದ ಸೋಲಿಸಿದರು.* ಜರ್ಮನಿಯ ನೀಲ್ಸ್ ಮೆಕ್ಡೊನಾಲ್ಡ್, ತಮ್ಮದೇ ದೇಶದ ಮ್ಯಾಕ್ಸ್ ಶೊಯೆನಾಸ್ ವಿರುದ್ಧ 6–7, 6–0, 6–3 ಅಂಕಗಳಿಂದ ಗೆದ್ದು ಬಾಲಕರ ವಿಭಾಗದ ಕಿರೀಟ ಪಡೆದರು.* ಮಾರ್ಸೆಲ್ ಗ್ರಾನೊಲರ್ಸ್ (ಸ್ಪೇನ್) ಮತ್ತು ಝೆಬಾಲೊಸ್ (ಅರ್ಜೆಂಟೀನಾ) ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ 6–0, 6–7(5), 7–5 ಅಂಕಗಳಿಂದ ಬ್ರಿಟನ್ ಜೋಡಿ ವಿರುದ್ಧ ಜಯಿಸಿದರು. ಈ ಜೋಡಿಯ ಮೊದಲ ಫ್ರೆಂಚ್ ಓಪನ್ ಡಬಲ್ಸ್ ಪ್ರಶಸ್ತಿಯಾಗಿದೆ.