* ಭಾರತೀಯ ನೌಕಾಪಡೆ ತನ್ನ ಅತ್ಯಾಧುನಿಕ ಆಂಟಿ-ಸಬ್ಮೆರಿನ್ ವಾರ್ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC)ಗಳ ಎರಡನೇ ಹಡಗನ್ನು "ಆಂಡ್ರೋತ್" ಎಂದು ನಾಮಕರಣ ಮಾಡಿ, ಅಕ್ಟೋಬರ್ 6ರಂದು ವಿಶಾಖಪಟ್ಟಣಂ ನೌಕಾ ಡಾಕ್ಯಾರ್ಡ್ನಲ್ಲಿ ಸೇರ್ಪಡೆಗೊಳಿಸಲು ಸಜ್ಜಾಗಿದೆ.* ಈ ಸಮಾರಂಭವನ್ನು ಪೂರ್ವ ನೌಕಾ ಕಮಾಂಡ್ ಮುಖ್ಯಸ್ಥ ವೈಸ್ ಅಡ್ಮಿರಲ್ ರಾಜೇಶ್ ಪೆಂಡಾರ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತದೆ.* ಕೋಲ್ಕತ್ತಾದ GRSE ಲಿಮಿಟೆಡ್ ಸಂಸ್ಥೆ 80% ಕ್ಕೂ ಹೆಚ್ಚು ಸ್ಥಳೀಯ ತಂತ್ರಜ್ಞಾನ ಬಳಸಿ ಹಡಗನ್ನು ನಿರ್ಮಿಸಿದೆ. ಇದು ಆತ್ಮನಿರ್ಭರ ಭಾರತ ದೃಷ್ಟಿಕೋಣದ ಪ್ರತೀಕವಾಗಿದ್ದು, ನೌಕಾನಿರ್ಮಾಣ ನಿರ್ದೇಶನಾಲಯದ ಮಾರ್ಗದರ್ಶನದಲ್ಲಿ 2025ರ ಸೆಪ್ಟೆಂಬರ್ 13ರಂದು ನೌಕಾಪಡೆಯ ವಶಕ್ಕೆ ಒಪ್ಪಿಸಲಾಯಿತು.* ಹಡಗಿನ ಹೆಸರಾದ ಅಂಡ್ರೋತ್ ಲಕ್ಷದ್ವೀಪದ ದ್ವೀಪದಿಂದ ಪ್ರೇರಿತವಾಗಿದೆ. ಇದು ನಿವೃತ್ತಿಯಾದ ಐಎನ್ಎಸ್ ಆಂಡ್ರೋತ್(P69)ನ ಪರಂಪರೆಯನ್ನು ಮುಂದುವರಿಸುತ್ತಿದೆ.* ಆಧುನಿಕ ಶಸ್ತ್ರಾಸ್ತ್ರ, ಸೆನ್ಸರ್ಗಳು, ಸಂವಹನ ತಂತ್ರಜ್ಞಾನ ಹಾಗೂ ವಾಟರ್ಜೆಟ್ ಚಾಲನಾ ವ್ಯವಸ್ಥೆಗಳಿಂದ ಕೂಡಿದ ಈ ಹಡಗು ಸಮುದ್ರದಡಿಯ ಬೆದರಿಕೆಗಳನ್ನು ಪತ್ತೆಹಚ್ಚಿ ನಾಶಪಡಿಸಲು ವಿನ್ಯಾಸಗೊಳಿಸಲಾಗಿದೆ. ಜೊತೆಗೆ, ಇದು ಸಮುದ್ರ ನಿಗಾವಳಿ, ಹುಡುಕಾಟ-ರಕ್ಷಣಾ ಕಾರ್ಯಾಚರಣೆಗಳು ಹಾಗೂ ಕರಾವಳಿ ರಕ್ಷಣೆಯಲ್ಲೂ ಸಮರ್ಥವಾಗಿದೆ.* ಆಂಡ್ರೋತ್ ಸೇರ್ಪಡೆ ಭಾರತೀಯ ನೌಕಾಪಡೆಯ ಆಂಟಿ-ಸಬ್ಮೆರಿನ್ ಸಾಮರ್ಥ್ಯವನ್ನು ಬಲಪಡಿಸುವುದರೊಂದಿಗೆ, ದೇಶೀಯವಾಗಿ ಯುದ್ಧನೌಕೆಗಳನ್ನು ನಿರ್ಮಿಸುವ ಭಾರತದ ಸಂಕಲ್ಪವನ್ನು ಮತ್ತಷ್ಟು ದೃಢಪಡಿಸುತ್ತದೆ.