* ಪ್ರತಿವರ್ಷ ಅಕ್ಟೋಬರ್ 9ರಂದು ಜಗತ್ತಿನಾದ್ಯಂತ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. * ಪ್ರತಿವರ್ಷ ಒಂದೊಂದು ಧೈಯವಾಕ್ಯದೊಂದಿಗೆ ಈ ದಿನವನ್ನು ಸಂಭ್ರಮಿಸಲಾಗುತ್ತಿದೆ. ವಿಶ್ವ ಅಂಚೆ ದಿನ 2024 ರ ಥೀಮ್ 150 ವರ್ಷಗಳ ಸಂವಹನದ ಸಕ್ರಿಯತೆ ಮತ್ತು ಜನರ ಸಬಲೀಕರಣ ("150 years of enabling communication and empowering peoples across nations") ಎಂಬುದುವುದಾಗಿದೆ. * ಸ್ವಿಡ್ಡರ್‌ಲೆಂಡ್‌ನ ವಿಶ್ವ ಅಂಚೆ ಒಕ್ಕೂಟ 1874ರ ಅಕ್ಟೋಬರ್ 9ರಂದು ವಿಶ್ವ ಅಂಚೆ ದಿನವನ್ನು ಆರಂಭಿಸಿತು. 95 ವರ್ಷಗಳ ನಂತರ ಅಂದರೆ, 1969ರಲ್ಲಿ ಜಪಾನ್‌ನ ಟೋಕಿಯೊದಲ್ಲಿರುವ ವಿಶ್ವ ಅಂಚೆ ಒಕ್ಕೂಟ ಅಂತಾರಾಷ್ಟ್ರೀಯ ಅಂಚೆ ದಿನವನ್ನು ಘೋಷಿಸಿತ್ತು. ಇದಕ್ಕೆ ಯುನೆಸ್ಕೊ ಕೂಡ ಸಾಥ್ ನೀಡಿತ್ತು. ಹೀಗಾಗಿ, ಈಗ ವಿಶ್ವದ ಸುಮಾರು 150 ರಾಷ್ಟ್ರಗಳಲ್ಲಿ ಪ್ರತಿವರ್ಷವೂ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತಿದೆ.* 1688ರಲ್ಲಿ ಇಂಗ್ಲೆಂಡ್‌ ನಲ್ಲಿ ಪೆನ್ನಿ ಪೋಸ್ಟ್ ವ್ಯವಸ್ಥೆ ಜಾರಿಯಲ್ಲಿತ್ತು. 1837ರಲ್ಲಿ ಸಾರ್ವಜನಿಕ ಅಂಚೆ ಪದ್ಧತಿ ಅಧಿಕೃತವಾಗಿ ಇಂಗ್ಲೆಂಡ್‌ನಲ್ಲಿ ಜಾರಿಗೆ ಬಂದಿತು. * ಭಾರತ ದೇಶದಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ 1727ರಲ್ಲಿ ಅಂಚೆ ಕಚೇರಿಗಳನ್ನು ಸ್ಥಾಪಿಸಲು ಮುಂದಾಯಿತು. 1764 ಮತ್ತು 1766ರ ಮಧ್ಯೆ ಭಾರತ ದೇಶದಲ್ಲಿ ಮುಂಬಯಿ, ಚೆನ್ನೈ, ಕೋಲ್ಕತ್ತಾಗಳಲ್ಲಿ ಅಂಚೆ ಕಚೇರಿಗಳನ್ನು ಸ್ಥಾಪಿಸಲಾಯಿತು.* ಭಾರತದಲ್ಲಿ ಪ್ರಥಮವಾಗಿ ಅಂಚೆ ಚೀಟಿಯನ್ನು ನೀಡಿದ್ದು ಕರಾಚಿಯಲ್ಲಿ. 1830ರಲ್ಲಿ ಇಂಗ್ಲೆಂಡಿಗೂ ಭಾರತಕ್ಕೂ ನಡುವೆ ಸೂಯೆಜ್ ಮೂಲಕವಾಗಿ ಅಂಚೆಯ ಸಾಗಾಟ ಆರಂಭವಾಯಿತು. * ಪ್ರತಿ ವರ್ಷ ಅಕ್ಟೋಬರ್ 10ರಂದು ಭಾರತದಲ್ಲಿ ರಾಷ್ಟ್ರೀಯ ಅಂಚೆ ದಿನವನ್ನು ಆಚರಿಸಲಾಗುತ್ತದೆ. ದೇಶದ ಅಂಚೆ ಕಚೇರಿಯು 6 ಅಂಕಿಯ ಪಿನ್‌ಕೋಡ್ ವ್ಯವಸ್ಥೆಯನ್ನು ಬಳಸುತ್ತಿದೆ.