* ಶೈಕ್ಷಣಿಕ ಸಂಶೋಧನೆಯಲ್ಲಿ ಮತ್ತು ನಾಗರಿಕ ಸಮಾಜ ಮತ್ತು ವ್ಯವಹಾರಗಳ ಅಭಿವೃದ್ಧಿಯಲ್ಲಿ ಅಂಕಿಅಂಶಗಳ ಮಹತ್ವವನ್ನು ಕೇಂದ್ರೀಕರಿಸಲು ಪ್ರತಿ ವರ್ಷ ಅಕ್ಟೋಬರ್ 20 ರಂದು ವಿಶ್ವ ಅಂಕಿಅಂಶ ದಿನವನ್ನು ಆಚರಿಸಲಾಗುತ್ತದೆ.* ಯುನೈಟೆಡ್ ನೇಷನ್ಸ್ 2010ರಲ್ಲಿ ವಿಶ್ವ ಅಂಕಿ ಅಂಶ ದಿನವನ್ನು ಅಧಿಕೃತವಾಗಿ ಘೋಷಿಸಿತು. 2010, ಅಕ್ಟೋಬರ್ 20ರಂದು ಪ್ರಥಮ ಬಾರಿಗೆ ವಿಶ್ವ ಅಂಕಿ ಅಂಶ ದಿನವನ್ನು ಆಚರಿಸಲಾಯಿತು. 2010ರಿಂದ 130ಕ್ಕೂ ಅಧಿಕ ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತವೆ. * ಭಾರತದಲ್ಲಿ ಪ್ರತಿ ವರ್ಷ ಜೂನ್ 29ರಂದು ರಾಷ್ಟ್ರೀಯ ಅಂಕಿ-ಅಂಶ ದಿನವೆಂದು ಆಚರಿಸಲಾಗುತ್ತದೆ. ಭಾರತೀಯ ವಿಜ್ಞಾನಿ ಮತ್ತು ಸಂಖ್ಯಾಶಾಸ್ತ್ರಜ್ಞ ಪ್ರೊಫೆಸರ್ ಪ್ರಶಾಂತ ಚಂದ್ರ ಮಹಲನೋಬಿಸ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ಅಂಕಿ-ಅಂಶ ದಿನವೆಂದು ಆಚರಿಸಲಾಗುತ್ತದೆ.* ಪ್ರಶಾಂತ ಚಂದ್ರ ಮಹಲನೋಬಿಸ್ ಅವರನ್ನು ಭಾರತದ ಸಂಖ್ಯಾಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ.ಅಂಕಿ ಅಂಶ ವಿಷಯವನ್ನು ಅಧ್ಯಯನ ಕ್ಷೇತ್ರವಾಗಿ ಜನಪ್ರಿಯಗೊಳಿಸುವ ಗುರಿ ಹೊಂದಿದೆ.