* ಪ್ರತಿ ವರ್ಷ ಅಕ್ಟೋಬರ್ 16 ರಂದು ಜಗತ್ತಿನಾದ್ಯಂತ ‘ವಿಶ್ವ ಆಹಾರ ದಿನ’ವನ್ನು ಆಚರಿಸಲಾಗುತ್ತದೆ. ಪ್ರಸ್ತುತ 150ಕ್ಕೂ ಹೆಚ್ಚು ದೇಶಗಳು ವಿಶ್ವ ಆಹಾರ ದಿನವನ್ನು ಆಚರಿಸುತ್ತಿವೆ.* ವಿಶ್ವ ಆಹಾರ ದಿನ 2025ರ ಥೀಮ್ "ಉತ್ತಮ ಆಹಾರ, ಉತ್ತಮ ಭವಿಷ್ಯಕ್ಕಾಗಿ ಎಲ್ಲರು ಒಟ್ಟಾಗಿ ಕೈಜೋಡಿಸಿ" ಎಂಬುವುದು ಈ ವರ್ಷದ ಧ್ಯೇಯವಾಕ್ಯವಾಗಿದೆ. ಪ್ರಪಂಚದ ಅನೇಕ ಭಾಗದಲ್ಲಿ ಹಸಿವಿನಿಂದ ಬಳಲುವ ಜನರಿಗೂ, ಇನ್ನೊಂದು ಭಾಗದಲ್ಲಿ ಅತಿಯಾದ ಆಹಾರ ನಷ್ಟಮತ್ತು ಬೊಜ್ಜು (ಒಬೆಸಿಟಿ) ಸಮಸ್ಯೆಯಿರುವವರಿಗೆ ಸಮತೋಲನ ತರುವುದು ಈ ಧೈಯವಾಕ್ಯದ ಉದ್ದೇಶವಾಗಿದೆ ಎಂದು ಎಫ್ಎಒ ಹೇಳಿದೆ. * 1945 ಅಕ್ಟೋಬರ್ 16ರಂದು ರೋಮ್ನಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಯೂ ಅಸ್ತಿತ್ವಕ್ಕೆ ಬಂದಿತ್ತು. ಆ ಬಳಿಕ ಸದಸ್ಯರಾಷ್ಟ್ರಗಳ ಸಾಮಾನ್ಯ ಸಭೆಯೊಂದರ ವೇಳೆ ಹಂಗೇರಿಯ ನಿಯೋಗದ ಮುಖ್ಯಸ್ಥರಾದ ಡಾ.ಪಾಲ್ ರೊಮೊಯ್, ಸಂಸ್ಥೆಯ ಸ್ಥಾಪನಾ ದಿನವನ್ನೇ ವಿಶ್ವ ಆಹಾರ ದಿನ’ವನ್ನಾಗಿ ಆಚರಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆ ಬಳಿಕ ಅ.16ರಂದು ವಿಶ್ವ ಆಹಾರ ದಿನಾಚರಣೆಯ ನಿರ್ಣಯ ಕೈಗೊಳ್ಳಲಾಗಿದ್ದು,1981ರಿಂದ ವಿಶ್ವ ಆಹಾರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.* ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ವಿಶ್ವ ಆಹಾರ ದಿನವು ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿಯ ಪ್ರಕಾರ, “ಜಗತ್ತಿನಲ್ಲಿ 2.8 ಶತಕೋಟಿಗೂ ಹೆಚ್ಚು ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಅಸಮರ್ಥರಾಗಿದ್ದಾರೆ. * ಇತ್ತೀಚೆಗೆ ಜಾಗತಿಕ ಹಸಿವು ಸೂಚ್ಯಂಕ (ಜಿಎಚ್ಐ) ಪ್ರಕಟಗೊಂಡಿದ್ದು ಭಾರತವು 102ನೇ ಸ್ಥಾನದಲ್ಲಿದೆ. ಭಾರತವು ಈಗಾಗಲೇ ಜಾಗತಿಕ ಹಸಿವು ಸೂಚ್ಯಂಕದಲ್ಲಿದೆ. ಜಾಗತಿಕವಾಗಿ ನಿತ್ಯವೂ ಸುಮಾರು 700 ಮಿಲಿಯನ್ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ.