* ಪ್ರತಿ ವರ್ಷ ಅಕ್ಟೋಬರ್ 16 ರಂದು ಆಹಾರ ಮತ್ತು ಕೃಷಿ ಸಂಸ್ಥೆಯ ಸ್ಥಾಪನೆಯ ಸ್ಮರಣಾರ್ಥ ವಿಶ್ವಾದ್ಯಂತ ವಿಶ್ವ ಆಹಾರ ದಿನವನ್ನು ಆಚರಿಸುತ್ತಾರೆ.* ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ಆಹಾರ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು, ಆರೋಗ್ಯಕರ ಜೀವನ ನಡೆಸಲು ಬೇಕಾದ ಪೌಷ್ಟಿಕಾಂಶವುಳ್ಳ ಆಹಾರ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು, ಆಹಾರವನ್ನು ವ್ಯರ್ಥ ಮಾಡದೆ, ಹಸಿವಿನಿಂದ ನರಳುವವರಿಗೆ ನೀಡುವಂತೆ ಅರಿವು ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶ.* ಆಹಾರ ಮತ್ತು ಕೃಷಿ ಸಂಸ್ಥೆ (FAO) ವಿಶ್ವ ಆಹಾರ ದಿನವನ್ನು ಗುರುತಿಸುತ್ತದೆ, 1945 ರಲ್ಲಿ ಸಂಸ್ಥೆಯ ಸ್ಥಾಪನೆಯನ್ನು ಆಚರಿಸುತ್ತದೆ. ಬಡತನ ಮತ್ತು ಹಸಿವನ್ನು ಹೋಗಲಾಡಿಸಲು ಆಹಾರ ಮತ್ತು ಕೃಷಿ ಸಂಸ್ಥೆಯು 1981 ರಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸಿತ್ತು.* 1979 ರಲ್ಲಿ, ಯುನೈಟೆಡ್ ನೇಷನ್ಸ್ ಫುಡ್ ಅಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್ (FAO) 1945 ರಲ್ಲಿ FAO ಸ್ಥಾಪನೆಯನ್ನು ಗೌರವಿಸಲು ವಿಶ್ವ ಆಹಾರ ದಿನವನ್ನು ಸ್ಥಾಪಿಸಿತು. ಈ ಜಾಗತಿಕ ಆಚರಣೆಯು ಪ್ರಪಂಚದಾದ್ಯಂತ ಹಸಿವಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ನಿವಾರಿಸಲು ಕ್ರಿಯೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. * ವಿಶ್ವ ಆಹಾರ ದಿನದ 2023 ರ ಥೀಮ್ "ನೀರು ಜೀವನ, ನೀರು ಆಹಾರ' (Water is life, Water is food)" ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ.