* ಭಾರತ ಮತ್ತು ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ (EFTA) ನಡುವಿನ FTA 2025ರ ಅಕ್ಟೋಬರ್ 1ರಿಂದ ಜಾರಿಗೆ ಬರುತ್ತದೆ. * ಇದು ಭಾರತದಲ್ಲಿ ಪರಿಸರ, ಕಾರ್ಮಿಕ ಹಾಗೂ ಮಾನವ ಹಕ್ಕುಗಳ ಕುರಿತ ಕಾನೂನುಬದ್ಧ ಸ್ಥಿರತೆ ನಿಯಮಾವಳಿಗಳನ್ನು ಪರಿಚಯಿಸುವ ಮೊದಲ ಒಪ್ಪಂದವಾಗಿದೆ.* EFTA ಒಳಗೊಂಡಿರುವ ಐಸ್ಲ್ಯಾಂಡ್, ಲೀಚ್ಟೆನ್ ಸ್ಟೆನ್, ನಾರ್ವೆ ಮತ್ತು ಸ್ವಿಟ್ಜರ್ಲ್ಯಾಂಡ್ ರಾಷ್ಟ್ರಗಳು ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ USD 100 ಬಿಲಿಯನ್ ಹೂಡಿಕೆ ಮಾಡಲು ಬದ್ಧವಾಗಿವೆ. ಇದರ ಫಲವಾಗಿ ಸುಮಾರು 10 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.* ಭಾರತವು ಸ್ವಿಟ್ಜರ್ಲ್ಯಾಂಡ್ಗೆ 94.7% ರಫ್ತು ಉತ್ಪನ್ನಗಳಿಗೆ ಪ್ರವೇಶ ಒದಗಿಸುತ್ತದೆ. ಬದಲಿಗೆ, ಭಾರತವು ಸ್ವಿಸ್ ಗಡಿಯಾರಗಳು, ಚಾಕೊಲೆಟ್ಗಳು ಮತ್ತು ವಜ್ರಗಳ ಮೇಲಿನ ಸುಂಕವನ್ನು ಕಡಿಮೆ/ರದ್ದು ಮಾಡಲಿದೆ.* ಔಷಧಿಗಳು, ಯಂತ್ರೋಪಕರಣಗಳು ಮತ್ತು ಪ್ರಕ್ರಿಯೆಯಾದ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ದೊರೆಯಲಿದೆ.* ಈ ಒಪ್ಪಂದವು ಪರಿಸರ ಸಂರಕ್ಷಣೆ, ಕಾರ್ಮಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಪಾಲನೆಗೆ ಬದ್ಧವಾಗಿರುತ್ತದೆ. ಇದರಿಂದ ಅಂತರರಾಷ್ಟ್ರೀಯ ಒಪ್ಪಂದಗಳ ಅನುಸರಣೆ ಮತ್ತು ವಾಣಿಜ್ಯದಲ್ಲಿ ಭರವಸೆ ಹೆಚ್ಚುತ್ತದೆ.* ಇಷ್ಟು ದೊಡ್ಡ ಹೂಡಿಕೆ ಭರವಸೆ ನೀಡಿದ ಇದು ಮೊದಲ ವಾಣಿಜ್ಯ ಒಪ್ಪಂದ. ಕೈಗಾರಿಕೆ, ಉದ್ಯೋಗ ಸೃಷ್ಟಿ ಮತ್ತು ಹೈ-ಎಂಡ್ ಉತ್ಪನ್ನಗಳ ಜಾಗತಿಕ ಮೌಲ್ಯ ಸರಪಳಿಗೆ ಭಾರತದ ಏಕೀಕರಣ ಬಲಪಡುತ್ತದೆ.* ಇದರೊಂದಿಗೆ ಭಾರತದ ವಾಣಿಜ್ಯ ನೀತಿ ಸಂಸ್ಥಿರ ಅಭಿವೃದ್ಧಿ(SDGs) ಗುರಿಗಳೊಂದಿಗೆ ಹೊಂದಾಣಿಕೆ ಹೊಂದುತ್ತದೆ.