Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಅಕ್ಕ ಪಡೆ ಯೋಜನೆ:ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಹೊಸ ಭದ್ರತಾ ಪಡೆ
17 ನವೆಂಬರ್ 2025
* ರಾಜ್ಯದಲ್ಲಿ ಮಹಿಳೆರ ಸುರಕ್ಷತೆಗಾಗಿ ಸರ್ಕಾರ ಮಹತ್ವದ ಕ್ರಮವೊಂದನ್ನು ಜಾರಿಗೊಳಿಸುತ್ತಿದೆ. ಕರ್ನಾಟಕದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆಗಾಗಿ ರಾಜ್ಯ ಸರ್ಕಾರವು
"ಅಕ್ಕ ಪಡೆ"
ಎಂಬ ಹೊಸ ಭದ್ರತಾ ಪಡೆಯನ್ನು ಪ್ರಾರಂಭಿಸುತ್ತಿದೆ.
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಆರಂಭವಾಗುತ್ತಿರುವ ಈ ಉಪಕ್ರಮವು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣದ ಬೆಂಬಲ ನೀಡಲು ಉದ್ದೇಶಿಸಿದೆ. ಅಕ್ಕ ಪಡೆ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ
ಕರ್ನಾಟಕ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ.
*
"ಅಕ್ಕ ಪಡೆ"
ಎಂಬುದು ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸಾಚಾರವನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಪ್ರಾರಂಭಿಸಿದ ಹೊಸ ಮಹಿಳಾ ಸುರಕ್ಷತೆ ಮತ್ತು ರಕ್ಷಣಾ ಪಡೆಯಾಗಿದೆ.
* ಇಂದಿರಾ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ
2025ರ ನವೆಂಬರ್ 19ರಂದು
ಈ ಪಡೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದು
ಬೀದರ್ ಜಿಲ್ಲೆಯಲ್ಲಿ ಯಶಸ್ವಿ ಪ್ರಾಯೋಗಿಕವಾಗಿ ಜಾರಿಯಾದ ಈ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಣೆ ಮಾಡಲಾಗುತ್ತಿದೆ.
* ಈ
"ಅಕ್ಕ ಪಡೆ"ಯು 2023 ರಲ್ಲಿ ಬೀದರ್ ಜಿಲ್ಲೆಯಲ್ಲಿ
ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಗೊಂಡು, ತ್ವರಿತ ಪ್ರತಿಕ್ರಿಯೆ ಮತ್ತು ಗೋಚರ ಸಾರ್ವಜನಿಕ ಉಪಸ್ಥಿತಿಗಾಗಿ ಬಲವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಗಳಿಸಿದ ನಂತರ ಈಗ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ.
* ಈ ಪಡೆಗಳು ಬಸ್ ನಿಲ್ದಾಣಗಳು, ಶಾಲೆಗಳು, ಕಾಲೇಜುಗಳು, ಮಾರುಕಟ್ಟೆಗಳು, ಉದ್ಯಾನವನಗಳು ಮತ್ತು ದೇವಾಲಯಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿವೆ. ಕಾರ್ಯಾಚರಣೆಗಾಗಿ ಹೊಯ್ಸಳ ವಾಹನಗಳ ಮಾದರಿಯಲ್ಲಿ ಮಾರ್ಪಾಡು ಮಾಡಿದ ವಾಹನಗಳನ್ನು ಬಳಸಲಾಗುತ್ತದೆ.
* ಮೊದಲ ಹಂತದಲ್ಲಿ ಉಡುಪಿ, ಮೈಸೂರು, ಮಂಗಳೂರು, ಬೆಳಗಾವಿ, ಬೆಂಗಳೂರು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಅಕ್ಕ ಪಡೆ ಕಾರ್ಯಾಚರಣೆ ಆರಂಭಿಸಲಿದೆ.
* ಈ ಉಪಕ್ರಮಕ್ಕಾಗಿ ರಾಜ್ಯ ಸರ್ಕಾರದಿಂದ
110 ಕೋಟಿ ರೂ.
ಅನುದಾನಕ್ಕೆ ಮನವಿ ಮಾಡಲಾಗಿದೆ. ಆರಂಭದಲ್ಲಿ
10-15 ಕೋಟಿ ರೂ.
ಮಂಜೂರಾಗುವ ಸಾಧ್ಯತೆಯಿದೆ.
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಾಕಾಂಕ್ಷೆಯ
"ಅಕ್ಕ ಪಡೆ"
ಯೋಜನೆಯಡಿ ಇದೀಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾದ ಮಹಿಳೆಯರಿಗೆ ಹೊಸ ಅವಕಾಶ ಲಭ್ಯವಾಗಿದೆ.
* ಅಕ್ಕ ಪಡೆಯು ರಾಜ್ಯಾದ್ಯಂತ ಇರುವ ಸಹಾಯವಾಣಿಯ ಮೂಲಕ ತಲುಪಲು ಲಭ್ಯವಿರುತ್ತದೆ. ಪ್ರತಿ ಘಟಕವು ಆರು ರಿಂದ ಹತ್ತು ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಕನಿಷ್ಠ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳು ಮತ್ತು ತರಬೇತಿ ಪಡೆದ ಎನ್ಸಿಸಿ ಕೆಡೆಟ್ಗಳು ಇರುತ್ತಾರೆ. ಅಕ್ಕ ಪಡೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸುತ್ತದೆ.
Take Quiz
Loading...