* ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ 16ನೇ ಘಟಿಕೋತ್ಸವ ಜನವರಿ.9 ರಂದು ನಡೆದಿದ್ದು, ಮೂವರು ಸಾಧಕಿಯರಿಗೆ ಗೌರವ ಡಾಕ್ಟರೇಟ್ ಹಾಗೂ 63 ವಿದ್ಯಾರ್ಥಿನಿಯರಿಗೆ 80 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗಿದೆ.* ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲಾ ಮತ್ತು ಕುಲಸಚಿವ ಶಂಕರಗೌಡ ಸೋಮನಾಳ ಅವರು ಕಾರ್ಯಕ್ರಮ ನಿರ್ವಹಿಸಿದರು.* ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅಧ್ಯಕ್ಷತೆಯಲ್ಲಿ ನಡೆದ ಘಟಿಕೋತ್ಸವದಲ್ಲಿ ಡಾ.ಮೀನಾಕ್ಷಿ ಬಾಳಿ, ನಟಿ ತಾರಾ, ಮತ್ತು ವೇದರಾಣಿ ದಾಸನೂರ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.* ಪ್ರೊ. ಶಶಿಕಲಾ ವಂಜಾರಿ ಘಟಿಕೋತ್ಸವ ಭಾಷಣ ಮಾಡಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಪಾಲ್ಗೊಂಡಿದ್ದರು. 13,461 ವಿದ್ಯಾರ್ಥಿಗಳಿಗೆ ಪದವಿ ಮತ್ತು 34 ಜನರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. 1,106 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಯೂ ನೀಡಲಾಯಿತು.* ಅರ್ಥಶಾಸ್ತ್ರ ವಿಭಾಗದಲ್ಲಿ ಪಲ್ಲವಿ ಯರನಾಳ, ಎಂಎ ಕನ್ನಡ- ಮಂದಿರಾ ತೆಳಗಡೆ, ಎಂಪಿಈಡಿ- ಸೌಜನ್ಯ ಜಿಂಜರವಾಡ, ಆಹಾರ ಸಂರಕ್ಷಣೆ ಮತ್ತು ಪೋಷಣೆ- ವನಿತಾ ಸಾವಂತ, ಸಮಾಜಶಾಸ್ತ್ರ ಅಧ್ಯಯನ- ಶಿಲ್ಪಾ ಸತ್ಯಪ್ಪ ಪದಕ ಪಡೆದಿದ್ದಾರೆ. ಪ್ರತಿಯೊಬ್ಬರೂ ತಲಾ ಮೂರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.