Job Description: * ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಮತ್ತು ಕೊರಿಯಾ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಗಳು ಜಂಟಿಯಾಗಿ ಅಖಿಲ ಭಾರತ ಅಂತರ ಎಸ್.ಎ.ಐ. ಟೇಕ್ವಾಂಡೋ ಚಾಂಪಿಯನ ಶಿಪ್ ಆಯೋಜನೆ ಮಾಡಲಾಗಿದ್ದು, ಇದು ಫೆ.24 ರಿಂದ ಫೆ.26 ರ ವರೆಗೆ ನಡೆಯಲಿದೆ.* ಭಾರತದಲ್ಲಿರುವ ಕೊರಿಯನ್ ಸಾಂಸ್ಕೃತಿಕ ಕೇಂದ್ರವು ಕೊರಿಯಾ-ಭಾರತ ರಾಜತಾಂತ್ರಿಕ ಸಂಬಂಧಗಳ 50 ನೇ ವಾರ್ಷಿಕೋತ್ಸವದ ಆಚರಣೆಯ ನಿಮಿತ್ತವಾಗಿ ಟೇಕ್ವಾಂಡೋ ಚಾಂಪಿಯನ್ ಶಿಪ್ ಆಯೋಜಿಸಿದ್ದಾರೆ.* ಕೊರಿಯಾ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯದ ಪ್ರದರ್ಶನ ತಂಡದಿಂದ ವಿಶೇಷ ಪ್ರದರ್ಶನಗಳು, ಎರಡು ದೇಶಗಳ ನಡುವೆ ಟೇಕ್ವಾಂಡೋ ಪುನರುಜ್ಜೀವನಕ್ಕಾಗಿ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮವೂ ಕೂಡ ನಡೆಯಲಿದೆ.