Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಪ್ರಥಮ ಮಹಿಳಾ ಮುಖ್ಯಸ್ಥೆಯ ನೇಮಕ
Authored by:
Akshata Halli
Date:
9 ಮಾರ್ಚ್ 2026
➤
ಬೆಂಗಳೂರು:
ಭಾರತದ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿತವಾಗಿದೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ
ಕೈಗಾ ಅಣು ವಿದ್ಯುತ್ ಸ್ಥಾವರದ (Kaiga Generating Station)
ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಕಾರ್ಯಾಚರಣೆಯ ಉನ್ನತ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತಿದ್ದಾರೆ. ಹಿರಿಯ ವಿಜ್ಞಾನಿ
ಆರ್. ಎಂ. ನಾಚಮ್ಮೆ (R.M. Nachammai)
ಅವರು ಈ ಮಹತ್ವದ ಹುದ್ದೆಗೆ ನೇಮಕಗೊಂಡಿದ್ದಾರೆ. ಮಾರ್ಚ್ 15, 2026 ರಂದು ಕೈಗಾ ಅಣು ವಿದ್ಯುತ್ ಸ್ಥಾವರದ 3 ಮತ್ತು 4 ನೇ ಘಟಕಗಳ ಚೀಫ್ ಸುಪರಿಂಟೆಂಡೆಂಟ್ ಆಗಿ ಅಧಿಕಾರ ಸ್ವೀಕರಿಸಲಿರುವ ಆರ್. ಎಂ. ನಾಚಮ್ಮೆ ಅವರು, ಭಾರತದ ಸಕ್ರಿಯ ಪರಮಾಣು ರಿಯಾಕ್ಟರ್ ಸಂಕೀರ್ಣದ ಕಾರ್ಯಾಚರಣೆಯ ನೇತೃತ್ವ ವಹಿಸಲಿರುವ ದೇಶದ ಪ್ರಥಮ ಮಹಿಳೆ ಎಂಬ ಇತಿಹಾಸ ನಿರ್ಮಿಸಲಿದ್ದಾರೆ.
➤
ಆರ್. ಎಂ. ನಾಚಮ್ಮೆ:
ನಾಚಮ್ಮೆ ಅವರು ಪರಮಾಣು ಶಕ್ತಿ ಕ್ಷೇತ್ರದಲ್ಲಿ 35 ವರ್ಷಗಳಿಗೂ ಹೆಚ್ಚು ಸುದೀರ್ಘ ಅನುಭವ ಹೊಂದಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ. 1991ರಲ್ಲಿ NPCIL ಸೇರಿದ ಅವರು, ತರಬೇತಿ ಅವಧಿಯಲ್ಲೇ ಟಾಪರ್ ಆಗಿ ಹೊರಹೊಮ್ಮಿ ಪ್ರತಿಷ್ಠಿತ
'ವಿಕ್ರಮ್ ಸಾರಾಭಾಯ್ ಪ್ರಶಸ್ತಿ'
ಗೆ ಭಾಜನರಾಗಿದ್ದರು. ಈ ಹಿಂದೆ ಮದ್ರಾಸ್ ಅಣು ವಿದ್ಯುತ್ ಸ್ಥಾವರ ಹಾಗೂ ಕೈಗಾದ 1 ಮತ್ತು 2ನೇ ಘಟಕಗಳಲ್ಲಿ ಪ್ರಮುಖ ತಾಂತ್ರಿಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ 2010, 2014 ಮತ್ತು 2017ರಲ್ಲಿ
NPCIL ವಿಶೇಷ ಕೊಡುಗೆ ಪ್ರಶಸ್ತಿ
ನೀಡಲಾಗಿದೆ.
➤
ಕೈಗಾ ಸ್ಥಾವರ:
ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ದಂಡೆಯ ಮಲ್ಲಾಪುರದಲ್ಲಿರುವ, ಎನ್ಪಿಸಿಐಎಲ್ (NPCIL) ನಿಂದ ನಿರ್ವಹಿಸಲ್ಪಡುವ ಕೈಗಾ ಅಣು ವಿದ್ಯುತ್ ಸ್ಥಾವರವು ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ (PHWR) ತಂತ್ರಜ್ಞಾನವನ್ನು ಹೊಂದಿದ್ದು, ಇದರ 1ನೇ ಘಟಕವು ಸತತ 962 ದಿನಗಳ ಕಾಲ ಕಾರ್ಯಾಚರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.
➤
ಭಾರತದ ಪರಮಾಣು ಗುರಿ - 2047:
ಭಾರತ ಸರ್ಕಾರವು
'ವಿಕಸಿತ್ ಭಾರತ್ 2047'
ಗುರಿಯ ಭಾಗವಾಗಿ, 2047ರ ವೇಳೆಗೆ ಪರಮಾಣು ಇಂಧನ ಉತ್ಪಾದನೆಯನ್ನು
100 ಗಿಗಾವಾಟ್ (GW)
ಗೆ ಏರಿಸುವ ಗುರಿ ಹೊಂದಿದೆ. ಪ್ರಸ್ತುತ ಭಾರತದ ಸ್ಥಾಪಿತ ಸಾಮರ್ಥ್ಯ ಸುಮಾರು 8.18 GW ಆಗಿದ್ದು, ಇದನ್ನು ಹನ್ನೆರಡು ಪಟ್ಟು ಹೆಚ್ಚಿಸುವ ಬೃಹತ್ ಯೋಜನೆಯಲ್ಲಿ ಮಹಿಳಾ ವಿಜ್ಞಾನಿಗಳ ಪಾತ್ರ ನಿರ್ಣಾಯಕವಾಗಿದೆ.
Take Quiz
Loading...