* ಅಭಿಷೇಕ್ ಶರ್ಮಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಬುಧವಾರ(ಮಾರ್ಚ್ 20) ಪ್ರಕಟವಾದ ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಕ್ರಮವಾಗಿ ಬ್ಯಾಟರ್ಗಳ ಮತ್ತು ಬೌಲರ್ಗಳ ವಿಭಾಗದಲ್ಲಿ ಜೀವನ ಶ್ರೇಷ್ಠ ಎರಡನೇ ಕ್ರಮಾಂಕ ಕಾಪಾಡಿ ಕೊಂಡಿದ್ದಾರೆ.* ಹಾರ್ದಿಕ್ ಪಾಂಡ್ಯ 252 ಪಾಯಿಂಟ್ಸ್ನೊಂದಿಗೆ ಆಲ್ರೌಂಡರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ದೀಪೇಂದ್ರ ಸಿಂಗ್(233)ಹಾಗೂ ಆಸ್ಟ್ರೇಲಿಯದ ಮಾರ್ಕಸ್ ಸ್ಟೋಯಿನಿಸ್(210)ಗಿಂತ ಮುಂದಿದ್ದಾರೆ.* ತಿಲಕ್ ವರ್ಮಾ ಹಾಗೂ ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬಿಡುಗಡೆಯಾದ ರ್ಯಾಂಕಿಂಗ್ನಲ್ಲಿ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನದಲ್ಲಿದ್ದಾರೆ.* 856 ರೇಟಿಂಗ್ ಅಂಕಗಳೊಂದಿಗೆ ಆಸ್ಟ್ರೇಲಿಯದ ಟ್ರಾವಿಸ್ ಹೆಡ್ ಬ್ಯಾಟರ್ಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಫಿಲ್ ಸಾಲ್ಟ್ (815 ಅಂಕ) ಮೂರನೇ ಸ್ಥಾನದಲ್ಲಿದ್ದಾರೆ. ಅಭಿಷೇಕ್ 829, ವರ್ಮಾ 804 ಮತ್ತು ಸೂರ್ಯಕುಮಾರ್ 739 ಅಂಕ ಗಳಿಸಿದ್ದಾರೆ.* ಬೌಲಿಂಗ್ ರ್ಯಾಂಕಿಂಗ್ನಲ್ಲಿ ವೆಸ್ಟ್ಇಂಡೀಸ್ನ ಅಕೀಲ್ ಹುಸೇನ್ (707 ಅಂಕ) ಅಗ್ರಸ್ಥಾನದಲ್ಲಿದ್ದು, ವರುಣ್ಗಿಂತ ಕೇವಲ ಒಂದು ಅಂಕ ಮುಂದಿದ್ದಾರೆ. ಇಂಗ್ಲೆಂಡ್ನ ಲೆಗ್ ಸ್ಪಿನ್ನರ್ ಆದಿಲ್ ರಶೀದ್ (705), ಶ್ರೀಲಂಕಾದ ವನಿಂದು ಹಸರಂಗ (700) ಹಾಗೂ ಆಸ್ಟ್ರೇಲಿಯದ ಲೆಗ್ ಸ್ಪಿನ್ನರ್ ಆಡಮ್ ಝಂಪಾ (694) ಕ್ರಮವಾಗಿ ಬಳಿಕದ ಸ್ಥಾನಗಳಲ್ಲಿ ಇದ್ದಾರೆ.* ಭಾರತದ ರವಿ ಬಿಷ್ಣೋಯಿ (674 ಪಾಯಿಂಟ್ಸ್) 6ನೇ ಸ್ಥಾನದಲ್ಲಿದ್ದು, ಅರ್ಷದೀಪ್ ಸಿಂಗ್ (653 ಪಾಯಿಂಟ್ಸ್) 9ನೇ ಸ್ಥಾನದಲ್ಲಿದ್ದಾರೆ.* ಪಾಕಿಸ್ತಾನದ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಝಿಲ್ಯಾಂಡ್ನ ಟಿಮ್ ಸೆಫರ್ಟ್ (13ನೇ ಸ್ಥಾನ), ಫಿನ್ ಅಲ್ಲೆನ್ (18ನೇ ಸ್ಥಾನ) ಮತ್ತು ಜೇಕಬ್ ಡಫಿ (12ನೇ ಸ್ಥಾನ) ಭಾರೀ ಪ್ರಗತಿ ಸಾಧಿಸಿದ್ದಾರೆ.