* ಇಂಗ್ಲೆಂಡ್ ಪ್ರವಾಸದಲ್ಲಿ 23 ವಿಕೆಟ್ ಪಡೆದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ 12 ಸ್ಥಾನ ಮೇಲೇರಿ, 15ನೇ ಸ್ಥಾನಕ್ಕೇರಿದ್ದಾರೆ. ಈ ಸಾಧನೆಗೆ ಓವಲ್ ಟೆಸ್ಟ್ನಲ್ಲಿ 9 ವಿಕೆಟ್ ಪಡೆದು ‘ಮ್ಯಾನ್ ಆಫ್ ದಿ ಮ್ಯಾಚ್’ ಆಗಿದ್ದೂ ಪ್ರಮುಖ ಕಾರಣವಾಗಿದೆ.* ಎಲ್ಲಾ ಐದು ಟೆಸ್ಟ್ಗಳಲ್ಲಿ ಆಡಿದ ಏಕೈಕ ವೇಗಿ ಸಿರಾಜ್, ಬುಮ್ರಾ ಇಲ್ಲದ ಪರಿಸ್ಥಿತಿಯಲ್ಲೂ ವೇಗದ ದಾಳಿಯನ್ನು ಯಶಸ್ವಿಯಾಗಿ ಮುನ್ನಡೆಸಿದರು.* ಕನ್ನಡಿಗ ಪ್ರಸಿದ್ಧ್ ಕೃಷ್ಣ, ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಶ್ರೇಯಾಂಕದಲ್ಲಿ 84ನೇ ಸ್ಥಾನದಿಂದ 59ನೇ ಸ್ಥಾನಕ್ಕೆ ಏರಿದ್ದಾರೆ. ಇದು ಅವರ ಟೆಸ್ಟ್ ಶ್ರೇಯಾಂಕದ ಉನ್ನತ ಸ್ಥಾನವಾಗಿದೆ.* ಜಸ್ಪ್ರಿತ್ ಬುಮ್ರಾ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ರಬಾಡಾ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಗಸ್ ಅಟ್ಕಿನ್ಸನ್ 8 ವಿಕೆಟ್ ಪಡೆದು ಮೊದಲ ಬಾರಿಗೆ ಟಾಪ್ 10 ರಲ್ಲಿ ಪ್ರವೇಶಿಸಿದ್ದಾರೆ. ಜೊತೆಗೆ ಜೋಶ್ ಟಂಗ್ 46ನೇ ಸ್ಥಾನಕ್ಕೇರಿದ್ದಾರೆ.