* ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ವರುಣ್ ಚಕ್ರವರ್ತಿಯನ್ನು ಜನವರಿ ತಿಂಗಳ ಐಸಿಸಿ ‘ಪ್ಲೇಯರ್ ಆಫ್ ದಿ ಮಂತ್’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.* ಐದು ಪಂದ್ಯಗಳಿಂದ 9.85ರ ಸರಾಸರಿ ಮೂಲಕ 14 ವಿಕೆಟ್ ಪಡೆದಿದ್ದು,7.66 ರಷ್ಟು ಎಕಾನಮಿ ರೇಟ್ ಇತ್ತು.* ಪಾಕಿಸ್ತಾನ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ 19 ವಿಕೆಟ್ ಪಡೆದ ವೆಸ್ಟ್ ಇಂಡೀಸ್ನ ಜೊಮೆಲ್ ವಾರಿಕನ್ ಮತ್ತು ಅದೇ ಸರಣಿಯಲ್ಲಿ 16 ವಿಕೆಟ್ ಪಡೆದ ಪಾಕಿಸ್ತಾನದ ನೋಮನ್ ಅಲಿ ಈ ಪ್ರಶಸ್ತಿ ಈ ಪೈಪೋಟಿಯಲ್ಲಿದ್ದಾರೆ.* ಐಸಿಸಿ ಮಹಿಳಾ ಅಂಡರ್-19 ಟಿ-20 ವಿಶ್ವಕಪ್ನಲ್ಲಿ ಸರಣಿ ಶ್ರೇಷ್ಠಳಾದ ಭಾರತದ ಗೊಂಗಡಿ ತ್ರಿಷಾ, ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ.* ಸರಣಿಯಲ್ಲಿ 309 ರನ್ ಸಿಡಿಸಿರುವ ತ್ರಿಷಾ ಅವರು, ಶತಕ ಬಾರಿಸಿದ ಮೊದಲ ಆಟಗಾರ್ತಿಯೂ ಆಗಿದ್ದರೆ.