* ಭಾರತ ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ಡಿಸೆಂಬರ್ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಬುಮ್ರಾ ಐಸಿಸಿ 'ಪ್ಲೇಯರ್ ಆಫ್ ದಿ ಮಂತ್' ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. * ಈ ಪಟ್ಟಿಯಲ್ಲಿ ಬುಮ್ರಾ ಸೇರಿದಂತೆ ಮೂವರು ಆಟಗಾರರು ಇದ್ದಾರೆ. ಜಸ್ಪ್ರೀತ್ ಬುಮ್ರಾ ಡಿಸೆಂಬರ್ನಲ್ಲಿ ಮೂರು ಟೆಸ್ಟ್ ಪಂದ್ಯಗಳಲ್ಲಿ 14.22 ಸರಾಸರಿಯಲ್ಲಿ 22 ವಿಕೆಟ್ಗಳನ್ನು ಪಡೆದಿದ್ದರು.* ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದು ಟೆಸ್ಟ್ಗಳಲ್ಲಿ ಒಟ್ಟು 32 ವಿಕೆಟ್ಗಳನ್ನು ಕಬಳಿಸಿದ್ದರು. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ನಲ್ಲಿ ಆತಿಥೇಯ ತಂಡದ ಎರಡನೇ ಇನ್ನಿಂಗ್ಸ್ನಲ್ಲಿ ಬೆನ್ನು ಬಿಗಿತದ ಕಾರಣ ಬುಮ್ರಾ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. * ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್ನಲ್ಲಿ ಬುಮ್ರಾ ತಲಾ 9 ವಿಕೆಟ್ಗಳನ್ನು ಉರುಳಿಸಿದ್ದರು. ಈ ಕಾರಣದಿಂದಾಗಿ ಆಸ್ಟ್ರೇಲಿಯಾ ತಂಡಕ್ಕೆ ಕಠಿಣ ಸವಾಲು ನೀಡುವಲ್ಲಿ ಭಾರತ ಯಶಸ್ವಿಯಾಗಿತ್ತು.* ಪ್ರಶಸ್ತಿಗಾಗಿ ಬೂಮ್ರಾ ಅವರೊಂದಿಗೆ ಸ್ಪರ್ಧೆ ಒಡ್ಡಿರುವ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ದಕ್ಷಿಣ ಆಫ್ರಿಕಾದ ಸೀಮರ್ ಡೇನ್ ಪ್ಯಾಟರ್ಸನ್ ರೇಸ್ನಲ್ಲಿದ್ದಾರೆ.* ಪ್ಯಾಟ್ ಕಮ್ಮಿನ್ಸ್ ಮೂರು ಟೆಸ್ಟ್ಗಳಿಂದ 17.64 ಸರಾಸರಿಯಲ್ಲಿ 17 ವಿಕೆಟ್ ಪಡೆದಿದ್ದಾರೆ. ಅಡಿಲೇಡ್ನಲ್ಲಿ 5/57ರ ಅಮೋಘ ಪ್ರದರ್ಶನ ನೀಡಿದ್ದ ಪ್ಯಾಟ್, ಭಾರತ ವಿರುದ್ಧ 10 ವಿಕೆಟ್ಗಳಿಂದ ಜಯ ಗಳಿಸಲು ನೆರವಾಗಿದ್ದರು. ಬ್ಯಾಟಿಂಗ್ನಲ್ಲಿಯೂ ಮೆಲ್ಬರ್ನ್ ಟೆಸ್ಟ್ನಲ್ಲಿ ಕ್ರಮವಾಗಿ 49 ಮತ್ತು 41 ರನ್ ಸಿಡಿಸಿ ಗಮನ ಸೆಳೆದಿದ್ದರು.* ದಕ್ಷಿಣ ಆಫ್ರಿಕಾದ ಸೀಮರ್ ಡೇನ್ ಪ್ಯಾಟರ್ಸನ್ ಎರಡು ಟೆಸ್ಟ್ಗಳಲ್ಲಿ 16.92 ಸರಾಸರಿಯಲ್ಲಿ 13 ವಿಕೆಟ್ಗಳನ್ನು ಪಡೆದಿದ್ದಾರೆ.* ಡಬ್ಲ್ಯೂಟಿಸಿ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ.