* ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರತಿ ತಿಂಗಳು ಕೊಡುವ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಯ ವಿಜೇತರನ್ನು ಘೋಷಿಸಲಾಗಿದೆ. ಅಕ್ಟೋಬರ್ ತಿಂಗಳ ವಿಜೇತರನ್ನು ನವೆಂಬರ್ 10 (ಶುಕ್ರವಾರ) ರಂದು ಘೋಷಣೆ ಮಾಡಿದ್ದು, ಈ ವಿಶ್ವಕಪ್ ನಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ನ್ಯೂಜಿಲ್ಯಾಂಡ್ ನ ಯುವ ಆಲ್ ರೌಂಡರ್ ರಚಿನ್ ರವೀಂದ್ರ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.* ಭಾರತದ ಬೌಲರ್ ಜಸ್ಟೀತ್ ಬುಮ್ರಾ, ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಮತ್ತು ರಚಿನ್ ರವೀಂದ್ರ ನಾಮಿನೇಟ್ ಆಗಿದ್ದು ಇದೀಗ ಇಬ್ಬರನ್ನು ಮೀರಿಸಿ ರಚಿನ್ ರವೀಂದ್ರ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.* ಮಹಿಳಾ ವಿಭಾಗದಲ್ಲಿ ವೆಸ್ಟ್ ಇಂಡೀಸ್ ನ ಹೀಲಿ ಮ್ಯಾಥ್ಯೂಸ್ ಅವರಿಗೆ ಪ್ರಶಸ್ತಿ ದೊರೆತಿದೆ.